ನರೇಂದ್ರ ಮೋದಿ
ದೇಶ
ಅಭಿವೃದ್ಧಿ-ಉದ್ಯೋಗಕ್ಕಾಗಿ ಬಿಹಾರಿಗರು ಈ ಬಾರಿ ಬಿಜೆಪಿಗೆ ಮತ ಹಾಕ್ತಾರೆ: ಮೋದಿ
ಬಿಹಾರಿಗರು ಈ ಭಾರಿ ಅಭಿವೃದ್ಧಿ ಮತ್ತು ಉದ್ಯೋಗಕ್ಕಾಗಿ ಬಿಜೆಪಿಗೆ ಮತ ಹಾಕಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ...
ಭಾಗಲ್‌ಪುರ: ಬಿಹಾರಿಗರು ಈ ಭಾರಿ ಅಭಿವೃದ್ಧಿ ಮತ್ತು ಉದ್ಯೋಗಕ್ಕಾಗಿ ಬಿಜೆಪಿಗೆ ಮತ ಹಾಕಲಿದ್ದಾರೆ ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಬಿಹಾರದ ವಿಧಾನಸಭೆ ಚುನಾವಣೆ ಹಿನ್ನೆಲೆ ಬಿಹಾರದ ಭಾಗಲ್‌ಪುರದ ಬಿಜೆಪಿ ಪರಿವರ್ತನಾ ರ್ಯಾಲಿಯಲ್ಲಿ ಮಾತನಾಡದಿ ಮೋದಿ ಅವರು, ಬಿಹಾರದ ಜನತೆ ಬಿಜೆಪಿ ರ್ಯಾಲಿಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಾಗಿಯಾಗಿರುವುದು ಬಿಜೆಪಿ ಮೇಲೆ ಬಿಹಾರಿಗಳಿಗಿರುವ ಒಲವನ್ನು ತೋರಿಸುತ್ತದೆ. ಈ ಬಾರಿ ಬಿಹಾರದ ಜನತೆ ಬಿಜೆಪಿಗೆ ಬಹುಮತ ನೀಡಲಿದ್ದಾರೆ ಎಂದರು.
ಇದೇ ವೇಳೆ ಜೆಡಿಯು ಪಕ್ಷದ ಮುಖ್ಯಸ್ಥ ನಿತೀಶ್ ಕುಮಾರ್ ಹಾಗೂ ಆರ್ ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ವಿರುದ್ಧ ವಾಗ್ದಾಳಿ ನಡೆಸಿದ ಮೋದಿ ಅವರು, ಕಳೆದ 25 ವರ್ಷಗಳಿಂದ ಕೆಲವರು ಬಿಹಾರದ ಜನತೆಗೆ ಸುಳ್ಳು ಹೇಳುತ್ತಾ ಬಂದಿದ್ದಾರೆ. ಅಂತವರ ವಿರುದ್ಧ ಬಿಹಾರ ಜನತೆ ನಿಂತಿದ್ದಾರೆ ಎಂದರು.
ಬಿಹಾರ ವಿಧಾನಸಭೆ ಚುನಾವಣೆಗೆ ಬಿಜೆಪಿ ಭರದ ಸಿದ್ಧತೆ ನಡೆಸಿದ್ದು, ಬಿಹಾರದ ಭಾಗಲ್ವರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನಾಲ್ಕನೇ ರ್ಯಾಲಿ ಇದಾಗಿತ್ತು. ಈ ಭಾರಿ ವಿಧಾನಸಭೆ ಚುನಾವಣೆಯಲ್ಲಿ ಬಿಹಾರದ ಜನತೆ ಬಹುಮತ ನೀಡಿದರೆ ಜನರ ಆಕಾಂಕ್ಷೆಗಳನ್ನು ಪೂರೈಸಲು ಬಿಜೆಪಿ ಸಿದ್ಧವಾಗಿದೆ ಎಂದರು.
ಜೆಡಿಯು, ಆರ್ ಜೆಡಿ, ಕಾಂಗ್ರೆಸ್ ಮೈತ್ರಿ ಬಗ್ಗೆ ಟೀಕಿಸಿದ ಮೋದಿ, ಎಷ್ಟು ಪಾರ್ಟಿಗಳು ಬಂದಾಗಿದ್ದರು ಬಿಹಾರದಲ್ಲಿ ಬದಲಾವಣೆ ತಡೆಯಲು ಯಾರಿಂದಲೂ ಸಾಧ್ಯವಿಲ್ಲ ಎಂದರು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ