ದೇಶದಲ್ಲಿ 'ಓಂ' ಎಂದರೂ ವಿವಾದ ಆಗುತ್ತೆ: ಪ್ರಧಾನಿ ಮೋದಿ

ಓಂ ಎಂದು ಹೇಳಿದರೂ ದೇಶದಲ್ಲಿ ವಿವಾದ ಉಂಟಾಗುತ್ತದೆ. ಏಕೆಂದರೆ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ತಾತ್ವಿಕ ವಿಚಾರಗಳಲ್ಲಿ...
ನರೇಂದ್ರ ಮೋದಿ
ನರೇಂದ್ರ ಮೋದಿ

ನವದೆಹಲಿ: ``ಓಂ ಎಂದು ಹೇಳಿದರೂ ದೇಶದಲ್ಲಿ ವಿವಾದ ಉಂಟಾಗುತ್ತದೆ. ಏಕೆಂದರೆ ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ತಾತ್ವಿಕ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ವ್ಯಕ್ತವಾಗುತ್ತಿದೆ.

ಹೀಗಾಗಿ, ಈ ಶಬ್ದವನ್ನು ಹೇಗೆ ಹೇಳಬೇಕು ಎಂಬ ಬಗ್ಗೆ ವಾರದ ಕಾಲ ಚರ್ಚೆ ಆರಂಭವಾಗಬಹುದು''  ಹೀಗೆಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ದೆಹಲಿಯಲ್ಲಿ ತುಳಸೀದಾಸರ ರಾಮಚರಿತ ಮಾನಸದ ಡಿಜಿಟಲ್ ಆವೃತ್ತಿ ಬಿಡುಗಡೆ ಮಾಡಿ ಅವರು ಮಾತನಾಡುತ್ತಿದ್ದರು.

ಆದರೆ ತಮ್ಮ ಹೇಳಿಕೆ ಬಗ್ಗೆ ಹೆಚ್ಚಿನ ವಿವರಣೆ ನೀಡಲಿಲ್ಲ. ಮಾತು ಮುಂದುವರಿಸಿದ ಪ್ರಧಾನಿ ``ಈ ದೇಶದಲ್ಲಿ ರಾಮಚರಿತ ಮಾನಸದ ಬಗ್ಗೆ ಯಾರೂ ಪ್ರಶ್ನೆ ಮಾಡಿಲ್ಲ. ಇದುವರೆಗೆ ವಿವಾದ ಉಂಟಾಗಿಲ್ಲ. ಅದರ ಬಗ್ಗೆ ವಿಶ್ವಾಸ ಇನ್ನೂ ಮುಂದುವರಿದುಕೊಂಡು ಬಂದಿದೆ.

ಇದೀಗ ಡಿಜಿಟಲ್ ಅವತರಣಿಕೆ ಬಿಡುಗಡೆಯಾಗಿದೆ. ಹೀಗಾಗಿ, ಮುಂದೆ ಈ ಬಗ್ಗೆ ವಿವಾದ ಉಂಟಾದರೂ ಅಚ್ಚರಿ ಇಲ್ಲ'' ಎಂದರು ಪ್ರಧಾನಿ. ಜು.21ರಂದು ಅಂತಾರಾಷ್ಟ್ರೀಯ ಯೋಗ ದಿನ ಆಚರಣೆ ವೇಳೆ ಸೂರ್ಯ ನಮಸ್ಕಾರಕ್ಕೆ ಸಂಬಂಧಿಸಿದಂತೆ ಹಲವು ಮುಸ್ಲಿಂ ಸಂಘಟನೆಗಳು ಆಕ್ಷೇಪ ಎತ್ತಿದ್ದವು. ಈ ಹಿನ್ನೆಲೆಯಲ್ಲಿ ಮೋದಿ ಹೇಳಿಕೆ ಮಹತ್ವದ್ದಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com