
ವಡೋದರಾ: 26/11 ರಂದು ನಡೆಡ ಮುಂಬಯಿ ದಾಳಿ ನನ್ನ ಜೀವನದ ದಿಕ್ಕನ್ನೇ ಬದಲಿಸಿದೆ ಎಂದು ಟಾಟಾ ಟ್ರಸ್ಟ್ನ ಮುಖ್ಯಸ್ಥ ರತನ್ ಟಾಟಾ ಹೇಳಿದ್ದಾರೆ.
ಖಾಸಗಿ ಸಂಸ್ಥೆಯೊಂದರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು ನನ್ನ ಬದುಕಿನಲ್ಲಿ ಕಳೆದ ದಿನಗಳನ್ನು ಮೆಲುಕು ಹಾಕಿದರೆ ಮೊದಲು ನೆನಪಿಗೆ ಬರುವುದೇ ಮುಂಬೈ ದಾಳಿ. ಇದು ನನ್ನ ಜೀವನದಲ್ಲಿ ಬದಲಾವಣೆಯ ಬೀರುಗಾಳಿ ಬೀಸಿದೆ ಎಂದು ಟಾಟಾ ಟ್ರಸ್ಟ್ನ ಮುಖ್ಯಸ್ಥ ರತನ್ ಟಾಟಾ ಹೇಳಿದ್ದಾರೆ.
ಉಗ್ರರ ಅಟ್ಟಹಾಸ ನನ್ನ ಧ್ವನಿಯನ್ನೆ ಅಡಗಿಸಿತ್ತು. ದಾಳಿಯಲ್ಲಿ ಸಂಭವಿಸಿದ ಸಾವು ನೋವಿನ ಹೃದಯ ವಿದ್ರಾವಕ ಘಟನೆಯಿಂದ ಇಂದಿಗೂ ಹೊರ ಬರಲು ಸಾಧ್ಯವಾಗುತ್ತಿಲ್ಲ. ಆ ಸಂದರ್ಭದಲ್ಲಿ ಪ್ರತಿ ಸಂಜೆ ಆಸ್ಪತ್ರೆಗೆ ಭೇಟಿ ನೀಡಿದಾಗ ಮನ ಕರಗುತ್ತಿತ್ತು ಎಂದು ನೊಂದು ಹೇಳಿದ್ದಾರೆಯ
ಗಾಯಾಳುಗಳು ಹಾಗೂ ರೋಗಿಗಳ ಹಣ ಕಟ್ಟಲು ಅಂದು ಯಾರೂ ಮುಂದೆ ಬರುತ್ತಿರಲ್ಲಿಲ್ಲ. ಇದರಿಂದಾಗಿ ಇಂಥವರಿಗಾಗಿಯೇ ಒಂದು ಟ್ರಸ್ಟ್ ಹುಟ್ಟುಹಾಕುವ ಆಲೋಚನೆ ಬಂದಿತು ಎಂದು ತಿಳಿಸಿದರು. ಈ ದೇಶದ ಕಾನೂನಿನಲ್ಲಿ ಎಲ್ಲರಿಗೂ ಸಮಾನ ಅವಕಾಶವಿದ್ದು, ದೇಶದ ಸರ್ವಾಂಗೀಣ ಪ್ರಗತಿಗೆ ಎಲ್ಲರೂ ಶ್ರಮಿಸಬೇಕೆಂದು ಸಲಹೆ ನೀಡಿದರು .
Advertisement