ವಿಪಕ್ಷಗಳ ಗದ್ದಲ: ಅಸಮಾಧಾನಗೊಂಡು ಸದನದಿಂದ ಹೊರ ನಡೆದ ಮೋದಿ

ವಿ.ಕೆ.ಸಿಂಗ್ ರಾಜೀನಾಮೆ ಒತ್ತಾಯಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದೂ, ಸ್ಪೀಕರ್ ಮಾತನ್ನೂ ಕೇಳದ ಹಂತ ತಲುಪಿದಾಗ ಮನನೊಂದ ಪ್ರಧಾನಿ ಮೋದಿ ಸದನದಿಂದ ...
ಪ್ರಧಾನಿ ನರೇಂದ್ರ ಮೋದಿ
ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಕೇಂದ್ರ ಸಚಿವ ವಿ.ಕೆ.ಸಿಂಗ್ ರಾಜೀನಾಮೆ ಒತ್ತಾಯಿಸಿ ಪ್ರತಿಪಕ್ಷಗಳು ಪ್ರತಿಭಟನೆ ನಡೆಸುತ್ತಿದ್ದೂ, ಸ್ಪೀಕರ್ ಮಾತನ್ನೂ ಕೇಳದ ಹಂತ ತಲುಪಿದಾಗ ಮನನೊಂದ ಪ್ರಧಾನಿ ಮೋದಿ ಸದನದಿಂದ ಹೊರ ನಡೆದರು.

ಸುಮಾರು 40 ನಿಮಿಷಗಳ ಗಲಾಟೆ ನಡೆದಿದ್ದು, ಸ್ಪೀಕರ್ ಸುಮಿತ್ರಾ ಮಹಾಜನ್ ಪ್ರತಿಭಟನೆ ನಡೆಸುತ್ತಿದ್ದ ಸಂಸದರಿಗೆ ಸುಮ್ಮನಾಗುವಂತೆ ಮನವಿ ಮಾಡಿಕೊಂಡರು ಪ್ರಯೋಜನವಾಗಲಿಲ್ಲ.

ದಲಿತರ ವಿರುದ್ಧ 'ಅವಹೇಳನಕಾರಿ ಹೇಳಿಕೆ' ನೀಡಿರುವ ಸಚಿವ .ವಿ.ಕೆ. ಸಿಂಗ್ ರಾಜೀನಾಮೆ ನೀಡಬೇಕೆಂದು ಒಂದೇ ಸಮನೆ ಒತ್ತಾಯಿಸಿದರು 'ಸಿಂಗ್ ರಾಜೀನಾಮೆ ನೀಡಲಿ' ಎಂದು ಕೂಗುತ್ತಿದ್ದ ಪ್ರತಿಭಟನಾಕಾರರಿಗೆ ಸುಮ್ಮನಿರುವಂತೆ ಸ್ಪೀಕರ್ ಒಂದು ಕೈಯಿಂದ ಆಗ್ರಹಿಸುತ್ತಿದ್ದರೆ, ಮತ್ತೊಂದು ಕೈಯಲ್ಲಿ ಕಲಾಪ ಮುಂದುವರಿಸುವಂತೆ ಸೂಚಿಸುತ್ತಿದ್ದರು.

ಪ್ರಶ್ನೆ ವೇಳೆ ಮುಗಿದಾಗ, ಸ್ಪೀಕರ್ ಪ್ರತಿಪಕ್ಷಗಳಿಗೆ ಸದನ ಸುಗಮವಾಗಿ ನಡೆಯಲು ಅನುವು ಮಾಡಿಕೊಡುವಂತೆ ಆಗ್ರಹಿಸಿದರೂ, ಪ್ರತಿಭಟನಾನಿರತ ಸಂಸದರು ಸದನದಿಂದ ಹೊರ ನಡೆದರು. ಈ ಹಿನ್ನೆಲೆಯಲ್ಲಿ ಬೇಸತ್ತ ಪ್ರಧಾನಿ ಮೋದಿ ಲೋಕಸಭೆ ಕಲಾಪದಿಂದ ಎದ್ದು ಹೊರನಡೆದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com