ಚೆನ್ನೈನಲ್ಲಿ ಭಾರೀ ಮಳೆ: ಜಲಾವೃತ ಪ್ರದೇಶದಲ್ಲಿ ಮೊಸಳೆ ಕಾಟ!

ಕುಂಭದ್ರೋಣ ಮಳೆಯಿಂದಾಗಿ ಚೆನ್ನೈ ನಗರ ಸಂಪೂರ್ಣ ಜಲಾವೃತಗೊಂಡಿದ್ದು, ಮಳೆ ನೀರಿನಲ್ಲಿ ಮೊಸಳೆಗಳು ಓಡಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ...
ನೀರಿನಲ್ಲಿ ಓಡಾಡುತ್ತಿರುವ ಮೊಸಳೆ(ಸಾಂದರ್ಭಿಕ ಚಿತ್ರ)
ನೀರಿನಲ್ಲಿ ಓಡಾಡುತ್ತಿರುವ ಮೊಸಳೆ(ಸಾಂದರ್ಭಿಕ ಚಿತ್ರ)
ಚೆನ್ನೈ: ಕುಂಭದ್ರೋಣ ಮಳೆಯಿಂದಾಗಿ ಚೆನ್ನೈ ನಗರ ಸಂಪೂರ್ಣ ಜಲಾವೃತಗೊಂಡಿದ್ದು, ಮಳೆ ನೀರಿನಲ್ಲಿ ಮೊಸಳೆಗಳು ಓಡಾಡುತ್ತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಜನರಲ್ಲಿ ಆತಂಕ ಮೂಡಿಸಿದೆ.
ನಗರದಲ್ಲಿ ನೀರಿನ ಮಟ್ಟ ಹೆಚ್ಚಾಗಿರುವುದರಿಂದ ಚೆನ್ನೈನಲ್ಲಿರುವ ಮೊಸಳೆ ಪಾರ್ಕ್ನಿಂದ ಮೊಸಳೆಗಳು ಹೊರಬಂದಿರುವ ಸಾಧ್ಯತೆ ಇದ್ದು, ನೀರಿನಲ್ಲಿ ಮೊಸಳೆ ಓಡಾಡುತ್ತಿರುವ ಫೋಟೋಗಳಿಂದ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮೊಸಳೆ ಪಾರ್ಕ್ ನ ನಿರ್ದೇಶಕಿ ಡಾ. ಗೌರಿ ಅವರು, ಮೊಸಳೆ ಪಾರ್ಕ್ ನಿಂದ ಯಾವುದೇ ಮೊಸಳೆಗಳು ಹೊರಬಂದಿಲ್ಲ. ಇದರಿಂದಾಗಿ ಯಾರೂ ಭಯ ಪಡಬೇಕಾದ ಅವಶ್ಯಕತೆ ಇಲ್ಲ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಫೋಟೋಗಳು ಕೇವಲ ವದಂತಿ. ಯಾರು ಭಯಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com