ದೆಹಲಿ ಸಿಎಂ, ಸಚಿವರು, ಶಾಸಕರ ವೇತನ 4 ಪಟ್ಟು ಹೆಚ್ಚಳ

ಅರವಿಂದ್ ಕೇಜ್ರಿವಾಲ್ ನೇತೃತ್ವದ ದೆಹಲಿ ಸರ್ಕಾರ ತನ್ನ ಶಾಸಕರಿಗೆ ಬಂಪರ್ ಕೊಡುಗೆ ನೀಡಿದೆ.
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್

ನವದೆಹಲಿ: ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್ ಆದ್ಮಿ ಪಕ್ಷದ ದೆಹಲಿ ಸರ್ಕಾರ ತನ್ನ ಶಾಸಕರಿಗೆ ಬಂಪರ್ ಕೊಡುಗೆ ನೀಡಿದೆ.

ಮುಖ್ಯಮಂತ್ರಿ ಸಹಿತ ಸಚಿವರು ಹಾಗೂ ಶಾಸಕರ ವೇತನ ಹಾಗೂ ಇತರೆ ಭತ್ಯೆ ಹೆಚ್ಚಳಕ್ಕೆ ಸಂಬಂಧಿಸಿದ ವಿಧೇಯಕವನ್ನು ಇಂದು ದೆಹಲಿ ವಿಧಾನಸಭೆ ಅಂಗೀಕರಿಸಿದ್ದು, ಇದರೊಂದಿಗೆ ಶಾಸಕರ ವೇತನ ನಾಲ್ಕು ಪಟ್ಟು ಹೆಚ್ಚಾಗಲಿದೆ.

ಶಾಸಕರ ವೇತನ 12 ಸಾವಿರದಿಂದ 50 ಸಾವಿರಕ್ಕೆ ಹಾಗೂ ಸಚಿವರ ವೇತನ 20 ಸಾವಿರದಿಂದ 80 ಸಾವಿರಕ್ಕೆ ಹೆಚ್ಚಿಸಲಾಗಿದೆ.

ಕುಟುಂಬ ಹಾಗೂ ಕಚೇರಿ ನಿರ್ವಹಣೆ ವೇತನ ಸಾಕಾಗುತ್ತಿಲ್ಲ. ಹೀಗಾಗಿ ವೇತನ ಹೆಚ್ಚಳ ಮಾಡುವಂತೆ ದೆಹಲಿ ಶಾಸಕರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕರ ವೇತನ ಮತ್ತು ಭತ್ಯೆ ಹೆಚ್ಚಳ ಸಂಬಂಧ ಲೋಕಸಭಾ ಮಾಜಿ ಪ್ರಧಾನ ಕಾರ್ಯದರ್ಶಿ ಪಿಡಿಟಿ ಆಚಾರ್ಯ ನೇತೃತ್ವದಲ್ಲಿ ಸಮಿತಿ ರಚಿಸಲಾಗಿತ್ತು.

ಆಚಾರ್ಯ ನೇತೃತ್ವದ ಮೂವರು ಸದಸ್ಯರ ಈ ಸಮಿತಿ, ಶಾಸಕರ ವೇತನವನ್ನು ಮೂಲ ವೇತನದಲ್ಲಿ ಶೇ.400ರಷ್ಟು ಅಂದರೆ 12 ಸಾವಿರದಿಂದ 50 ಸಾವಿರಕ್ಕೆ ಏರಿಸುವಂತೆ ಶಿಫಾರಸು ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com