ಲೈಂಗಿಕ ದೌರ್ಜನ್ಯ ಅಪರಾಧಿಗಳ ವಯಕ್ತಿಕ ವಿವರನೋಂದಣಿ ಕಡ್ಡಾಯಗೊಳಿಸಲು ಸಲಹೆ
ಲೈಂಗಿಕ ದೌರ್ಜನ್ಯ ಅಪರಾಧಿಗಳ ವಯಕ್ತಿಕ ವಿವರನೋಂದಣಿ ಕಡ್ಡಾಯಗೊಳಿಸಲು ಸಲಹೆ

ಲೈಂಗಿಕ ದೌರ್ಜನ್ಯ ಅಪರಾಧಿಗಳ ವಯಕ್ತಿಕ ವಿವರನೋಂದಣಿ ಕಡ್ಡಾಯಗೊಳಿಸಿ: ಮನೇಕಾ ಗಾಂಧಿ

ಲೈಂಗಿಕ ಕಿರುಕುಳ ಅಪರಾಧಿಗಳ ಮೇಲೆ ನಿಗಾ ವಹಿಸಲು ಸ್ಥಳೀಯ ಪೊಲೀಸ್ ಅಧಿಕಾರಿಗಳು ಅಪರಾಧಿಗಳ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು
Published on

ನವದೆಹಲಿ: ಲೈಂಗಿಕ ಕಿರುಕುಳ ಅಪರಾಧಿಗಳ ಮೇಲೆ ನಿಗಾ ವಹಿಸಲು ಸ್ಥಳೀಯ ಪೊಲೀಸ್ ಅಧಿಕಾರಿಗಳು ಅಪರಾಧಿಗಳ ನೋಂದಣಿ ಮಾಡಿಕೊಳ್ಳುವುದನ್ನು ಕಡ್ಡಾಯಗೊಳಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಕಾನೂನು ಸಚಿವಾಲಯಕ್ಕೆ ಸೂಚನೆ ನೀಡಿದೆ.
ಲೈಂಗಿಕ ಕಿರುಕುಳ ಅಪರಾಧ ಪ್ರಕರಣಗಳಲ್ಲಿ ಕೋರ್ಟ್ ನೀಡಿರುವ ಆದೇಶದೊಂದಿಗೆ ಅಪರಾಧಿಗಳ ನೋಂದಣಿ ಮಾಡುವುದರಿಂದ ಅವರ ಚಲನವಲನಗಳ ಮೇಲೆ ಕಣ್ಣಿಡಲು ಸಾಧ್ಯವಾಗುತ್ತದೆ. ಸ್ಥಳೀಯ ಪೊಲೀಸ್ ಠಾಣೆಗಳಲ್ಲಿ ನೋಂದಣಿ ಮಾಡುವುದನ್ನು ಕಡ್ಡಾಯಗೊಳಿಸುವುದು ಮಾತ್ರವಲ್ಲದೇ ಅದನ್ನು ಕಾನೂನು ಮಾಡಬೇಕೆಂದು ಮಹಿಳಾ, ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಮನೇಕಾ ಗಾಂಧಿ ಕಾನೂನು ಸಚಿವರಿಗೆ ಬರೆದಿರುವ ಪತ್ರದಲ್ಲಿ ಒತ್ತಾಯಿಸಿದ್ದಾರೆ.
ನಿಯಮಿತ ಆಧಾರದಲ್ಲಿ ಅಪರಾಧಿಗಳು ಖುದ್ದು ಹಾಜರಾಗಿ ತಮ್ಮ ವೈಯಕ್ತಿಕ ವಿವರಗಳನ್ನು ಕಾನೂನು ಜಾರಿ ಸಂಸ್ಥೆಗಳಿಗೆ ನೀಡಬೇಕು. ಇಂತಹ ಮೇಲ್ವಿಚಾರಣೆ ಅವಧಿಯನ್ನು ನ್ಯಾಯಾಲಯಗಳು ನಿರ್ಧರಿಸಬೇಕು ಈ ಕ್ರಮದಿಂದ ಅಪರಾಧಿಗಳು ಮತ್ತೆ ಅಪರಾಧ ಕೃತ್ಯಗಳನ್ನು ನಡೆಸುವುದನ್ನು ತಡೆಗಟ್ಟಬಹುದು ಎಂದು ಮನೇಕಾ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

X

Advertisement

X
Kannada Prabha
www.kannadaprabha.com