ಸೋಮನಾಥ ದೇವಾಲಯ ನಿರ್ಮಾಣದ ಮಾದರಿಯಲ್ಲೇ ರಾಮಮಂದಿರ ನಿರ್ಮಾಣಕ್ಕೆ ಸಿದ್ಧತೆ ನಡೆಸಿ: ಮೋಹನ್ ಭಾಗವತ್

ಗುಜರಾತ್ ನಲ್ಲಿ ಸೋಮನಾಥ ದೇವಾಲಯ ನಿರ್ಮಾಣದ ಮಾದರಿಯಲ್ಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೂ ಸಿದ್ಧತೆ ನಡೆಸಲು ಆರ್.ಎಸ್.ಎಸ್ ಮುಖಂಡ ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ಆರ್ ಎಸ್ಎಸ್ ಮುಖಂಡ ಮೋಹನ್ ಭಾಗವತ್
ಆರ್ ಎಸ್ಎಸ್ ಮುಖಂಡ ಮೋಹನ್ ಭಾಗವತ್

ನವದೆಹಲಿ: ಗುಜರಾತ್ ನಲ್ಲಿ ಸೋಮನಾಥ ದೇವಾಲಯ ನಿರ್ಮಾಣದ ಮಾದರಿಯಲ್ಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೂ ಸಿದ್ಧತೆ ನಡೆಸಲು ಆರ್ ಎಸ್ಎಸ್ ಮುಖಂಡ ಮೋಹನ್ ಭಾಗವತ್ ಕರೆ ನೀಡಿದ್ದಾರೆ.
ಆರ್.ಎಸ್.ಎಸ್ ನ ಟ್ವಿಟರ್ ಹ್ಯಾಂಡಲ್ ಮೋಹನ್ ಭಾಗವತ್ ಅವರ ಹೇಳಿಕೆಯನ್ನು ಟ್ವೀಟ್ ಮಾಡಿದ್ದು, ಧಾರ್ಮಿಕ, ಸಾಂಸ್ಕೃತಿಕ ದೇಶವಾಗಿರುವ ಭಾರತಕ್ಕೆ ರಾಮ ಭಾರತದ ಆದರ್ಶ. ರಾಮನನ್ನು ಕೆಲವರು ದೇವರೆಂದು ನಂಬಿದರೆ ಇನ್ನೂ ಕೆಲವರು ಮಹಾನ್ ವ್ಯಕ್ತಿ ಎಂದು ಗುರುತಿಸುತ್ತಾರೆ ಎಂದು ಭಾಗವತ್ ಹೇಳಿರುವುದನ್ನು ಆರ್ ಎಸ್ಎಸ್ ಟ್ವಿಟರ್ ಖಾತೆ ಅಪ್ ಡೇಟ್ ಮಾಡಿದೆ.
ಗುಜರಾತ್ ನಲ್ಲಿ ಸೋಮನಾಥ ದೇವಾಲಯ ಅಂದಿನ ಗೃಹ ಮಂತ್ರಿ ಸರ್ದಾರ್ ಪಟೇಲ್ ಅವರ ಶ್ರಮದಿಂದ ನಿರ್ಮಾಣವಾಗಿತ್ತು ಹಾಗೂ ಸ್ವತಃ ರಾಷ್ಟ್ರಪತಿಗಳು ಸೋಮನಾಥ ದೇವಾಲಯಕ್ಕೆ ಶಂಕುಸ್ಥಾಪನೆ ನೆರವೇರಿಸಿದ್ದರು. ದೇಶದ ಜನತೆ ಸೋಮನಾಥ ದೇವಾಲಯವನ್ನೇ ಪ್ರೇರಣೆಯಾಗಿ ಪಡೆದು, ಸೋಮನಾಥ ದೇವಾಲಯ ನಿರ್ಮಾಣದ ಮಾದರಿಯಲ್ಲೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೂ ಸಿದ್ಧತೆ ನಡೆಸಬೇಕು ಎಂದು ಭಾಗವತ್ ಅಭಿಪ್ರಾಯಪಟ್ಟಿದ್ದಾರೆ.
1990 ರಲ್ಲಿ ಅಯೋಧ್ಯೆಯ ವಿವಾದಿತ ಪ್ರದೇಶದಲ್ಲಿ ಪಥಸಂಚಲನ ಕೈಗೊಳ್ಳಲು ಮುಂದಾಗಿ ಪೊಲೀಸರ ಗುಂಡಿಗೆ ಬಲಿಯಾಗಿದ್ದ ರಾಮ್ ಹಾಗೂ ಶರದ್ ಕೊಠಾರಿ ಅವರಿಂದ ಜನರು ಸ್ಪೂರ್ತಿ ಪಡೆದು ರಾಮಂದಿರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಭಾಗವತ್ ಹೇಳಿದ್ದಾರೆ. ಇದಕ್ಕೂ ಮುನ್ನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಮೋಹನ್ ಭಾಗವತ್, ರಾಮ ದೇಗುಲ ನಾವು ಬದುಕಿದ್ದ ಅವಧಿಯಲ್ಲೇ ನಿರ್ಮಾಣವಾಗಬೇಕಿದೆ. ದೇಗುಲವನ್ನು ನೋಡಿ ಕಣ್ತುಂಬಿಕೊಳ್ಳಬೇಕು ಎಂದು ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com