ಕುಟುಂಬ ಯೋಜನೆ ಬಗ್ಗೆ ಮುಸ್ಲಿಂ ಮಹಿಳೆಯರಲ್ಲಿ ಜಾಗೃತಿ ಮೂಡಿಸಲು ಆರ್ ಎಸ್ಎಸ್ ಅಭಿಯಾನ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮುಸ್ಲಿಂ ಮಹಿಳೆಯರಲ್ಲಿ ಕುಟುಂಬ ಯೋಜನೆ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಚಾಲನೆ ನೀಡಿದೆ.
ಆರ್ ಎಸ್ಎಸ್ ಅಭಿಯಾನದಲ್ಲಿ ಪಾಲ್ಗೊಂಡಿದ್ದಮುಸ್ಲಿಂ ಮಹಿಳೆರು
ಆರ್ ಎಸ್ಎಸ್ ಅಭಿಯಾನದಲ್ಲಿ ಪಾಲ್ಗೊಂಡಿದ್ದಮುಸ್ಲಿಂ ಮಹಿಳೆರು

ಅಜ್ಮೀರ್: ರಾಷ್ಟ್ರೀಯ ಸ್ವಯಂ ಸೇವಕ ಸಂಘ ಮುಸ್ಲಿಂ ಮಹಿಳೆಯರಲ್ಲಿ ಕುಟುಂಬ ಯೋಜನೆ ಕುರಿತು ಜಾಗೃತಿ ಮೂಡಿಸುವ ಅಭಿಯಾನಕ್ಕೆ ಚಾಲನೆ ನೀಡಿದೆ.
ಸಮಾನ ನಾಗರಿಕ ಸಂಹಿತೆ ಜಾರಿಗೆ ಒತ್ತಾಯಿಸುತ್ತಿರುವ ಆರ್ ಎಸ್ ಎಸ್, ಚಿಕ್ಕ ಕುಟುಂಬದ ಮಹತ್ವ, ವಿದ್ಯಾಭ್ಯಾಸ ಕುರಿತ ವಿಷಯಗಳ ಬಗ್ಗೆ ದೇಶಾದ್ಯಂತ  ಕಾರ್ಯಾಗಾರಗಳನ್ನು ಹಮ್ಮಿಕೊಳ್ಳುವ ಮೂಲಕ ಮುಸ್ಲಿಂ ಮಹಿಳೆಯರಲ್ಲಿ ಕುಟುಂಬ ಯೋಜನೆ ಬಗ್ಗೆ ಜಾಗೃತಿ ಮೂಡಿಸುವುದು ಈ ಅಭಿಯಾನದ ಉದ್ದೇಶ.
ರಾಜಸ್ಥಾನದಿಂದ ಈ ಅಭಿಯಾನ ಪ್ರಾರಂಭವಾಗಿದ್ದು  ಮುಂದಿನ ದಿನಗಳಲ್ಲಿ ಇದನ್ನು ದೇಶಾದ್ಯಂತ ವಿಸ್ತರಿಸಲು ನಿರ್ಧರಿಸಲಾಗಿದೆ. 5 ಸಾವಿರಕ್ಕೂ ಹೆಚ್ಚು ಮುಸ್ಲಿಂ ಮಹಿಳೆಯರು ಇದರಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಆರ್‌ಎಸ್‌ಎಸ್ ಮುಖಂಡ ಇಂದ್ರೇಶ್ ಕುಮಾರ್ ತಿಳಿಸಿದ್ದಾರೆ. ಉತ್ತಮ ಶಿಕ್ಷಣ ನೀಡುವುದರ ಬಗ್ಗೆ ಇಸ್ಲಾಮ್‌ನ ಪವಿತ್ರ ಗ್ರಂಥ ಖುರಾನ್‌ನಲ್ಲಿ ಹೇಳಿರುವ ಬಗ್ಗೆಯೂ ಜಾಗೃತಿ ಮೂಡಿಸಲಾಗುವುದು ಎಂದು ಅವರು ವಿವರಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com