
ನವದೆಹಲಿ: ಭಾರತೀಯ ಸಮಾಜದ ಅಂತರ್ಗತ ಮೌಲ್ಯಗಳನ್ನು ಕಾಪಾಡಲು ಪ್ರಬಲ ಮತ್ತು ಸ್ವತಂತ್ರ ನ್ಯಾಯಾಂಗದಿಂದ ಸಾಧ್ಯ ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾ. ಟಿಎಸ್ ಠಾಕೂರ್ ಅಭಿಪ್ರಾಯಪಟ್ಟಿದ್ದಾರೆ.
ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಮೊದಲ ಬಾರಿಗೆ ಮಾಧ್ಯಮಗಳೊಂದಿಗೆ ಮಾತನಾಡಿರುವ ನ್ಯಾ.ಠಾಕೂರ್, ನ್ಯಾಯಾಂಗ ಎಲ್ಲಾ ವರ್ಗಗಳ ಹಕ್ಕುಗಳನ್ನು ರಕ್ಷಿಸುತ್ತದೆ. ಸಹಿಷ್ಣುತೆ ಆಧಾರದಲ್ಲೇ ಭಾರತದ ಅಸ್ತಿತ್ವವಿದೆ. ಆದರೆ ಅದನ್ನು ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚುತ್ತಿರುವ ಬಗ್ಗೆ ನ್ಯಾ.ಠಾಕೂರ್ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ನ್ಯಾಯಾಂಗ ಭಾರತಿಯ ಸಮಾಜದ ಅಂತರ್ಗತ ಮೌಲ್ಯಗಳನ್ನು ಎಂದಿಗೂ ಕಾಪಾಡುವ ಸಾಮರ್ಥ್ಯ ಹೊಂದಿದ್ದು ಅದು ನ್ಯಾಯಾಂಗದ ಕರ್ತವ್ಯವೂ ಆಗಿದೆ ಭಾರತ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ, ಕೆಲವು ಅಸಂಗತ ಘಟನೆಗಳು ನಡೆಯುತ್ತವೆಎಂದು ನ್ಯಾ.ಠಾಕೂರ್ ಹೇಳಿದ್ದಾರೆ.
Advertisement