ಜಗದೀಶ್ ಟೈಟ್ಲರ್
ದೇಶ
ಸಿಖ್ ಗಲಭೆ: ಆರೋಪಿ ಕಾಂಗ್ರೆಸ್ ಮುಖಂಡ ಟೈಟ್ಲರ್ ಮೇಲೆ ಹಲ್ಲೆ
1984ರ ಸಿಖ್ ವಿರೋಧಿ ಗಲಭೆಯ ಆರೋಪಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಮೇಲೆ ಸಿಖ್ ಯುವಕನೊಬ್ಬ ಹಲ್ಲೆ ನಡೆಸಿದ ಘಟನೆ ಕಳೆದ ರಾತ್ರಿ ನಡೆದಿದೆ...
ನವದೆಹಲಿ: 1984ರ ಸಿಖ್ ವಿರೋಧಿ ಗಲಭೆಯ ಆರೋಪಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಮೇಲೆ ಸಿಖ್ ಯುವಕನೊಬ್ಬ ಹಲ್ಲೆ ನಡೆಸಿದ ಘಟನೆ ಕಳೆದ ರಾತ್ರಿ ನಡೆದಿದೆ.
ನವದೆಹಲಿಯ ಮೆಹರೌಲಿ ಪ್ರದೇಶದಲ್ಲಿನ ಮದುವೆ ಸಮಾರಂಭಕ್ಕೆ ಆಗಮಿಸಿದ್ದ ವೇಳೆ ಸಿಖ್ ಯುವಕನೊಬ್ಬ ಟೈಟ್ಲರ್ ಗೆ ಬಾಯಿಗೆ ಬಂದಂತೆ ಬೈದು, ಹಲ್ಲೆ ನಡೆಸಿರುವುದಾಗಿ ಟಿವಿ ಮಾಧ್ಯಮದ ವರದಿ ಮಾಡಿದೆ.
23 ವರ್ಷದ ಯುವಕ ಸೆಹಾಜ್ ಉಮಾಂಗ್ ಭಾಟಿಯಾ ಜಗದೀಶ್ ಟೈಟ್ಲರ್ ಮೇಲೆ ಗ್ಲಾಸ್ ಎಸೆದಿದ್ದು ದೆಹಲಿ ಆತನನ್ನು ಪೊಲೀಸರು ಬಂಧಿಸಿದ್ದಾರೆ.

