
ನವದೆಹಲಿ: ವಾಯುಮಾಲಿನ್ಯ ತಡೆಗಟ್ಟುವುದಕ್ಕಾಗಿ ನಾನು ಕಚೇರಿಗೆ ಬಸ್ಸಿನಲ್ಲಿ ಹೋಗುವುದಕ್ಕೂ ಸಿದ್ಧ ಎಂದು ಸುಪ್ರೀಂ ಕೋರ್ಟ್ ನ ಮುಖ್ಯನ್ಯಾಯಮೂರ್ತಿ ಟಿಎಸ್ ಠಾಕೂರ್ ಹೇಳಿದ್ದಾರೆ.
ಜಡ್ಜ್ ಗಳು ಕಾರ್ ಪೂಲಿಂಗ್ ಮಾಡುವುದರಿಂದ ವಾಯುಮಾಲಿನ್ಯ ತಡೆಗಟ್ಟಲು ಜನರಿಗೆ ಉತ್ತಮ ಸಂದೇಶ ರವಾನೆಯಾಗುವುದಾದರೆ ತಾವು ಕಾರ್ ಪೂಲಿಂಗ್ ಮಾಡುವುದಕ್ಕೆ ಸಿದ್ಧವಿರುವುದಾಗಿ ಟಿಎಸ್ ಠಾಕೂರ್ ತಿಳಿಸಿದ್ದಾರೆ. ಪ್ರತಿನಿತ್ಯ ಸಂಚರಿಸುವ ಖಾಸಗಿ ವಾಹನಗಳಿಗೆ ದಿನ ಬಿಟ್ಟು ದಿನ (ತಿಂಗಳಿಗೆ ಹದಿನೈದು ದಿನ) ಮಾತ್ರ ಅವಕಾಶ ನೀಡಲು ನಿರ್ಧರಿಸಿರುವ ದೆಹಲಿ ಸರ್ಕಾರದ ನಿಯಮವನ್ನು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಸ್ವಾಗತಿಸಿದ್ದಾರೆ.
ವಾಯುಮಾಲಿನ್ಯ ತಡೆಗಟ್ಟಲು ಮೋತಿಲಾಲ್ ನೆಹರು ಮಾರ್ಗ್ ನಿಂದ ಸುಪ್ರೀಂ ಕೋರ್ಟ್ ಗೆ ನಡೆದು ಹೋಗುವುದಕ್ಕೂ ಹಿಂಜರಿಯುವುದಿಲ್ಲ ಎಂದು ಟಿಎಸ್ ಠಾಕೂರ್ ಹೇಳಿದ್ದಾರೆ.
Advertisement