ಆಸಿಡ್ ದಾಳಿ: ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನೀಡಲು ರಾಜ್ಯಗಳಿಗೆ ಸುಪ್ರೀಮ್ ಕೋರ್ಟ್ ಸೂಚನೆ

ಆಸಿಡ್ ದಾಳಿಯಿಂದ ಬದುಕುಳಿದವರಿಗೆ ಅಗತ್ಯ ಪರಿಹಾರ, ಪುನರ್ವಸತಿ ಮತ್ತು ಉಚಿತ ಚಿಕಿತ್ಸೆ ನೀಡುವಂತೆ ಹಿಂದಿನ ತೀರ್ಪಿನಲ್ಲಿ ನೀಡಿದ್ದ ಆದೇಶಾನುಸಾರವಾಗಿ ನಡೆದುಕೊಳ್ಳಲು
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಆಸಿಡ್ ದಾಳಿಯಿಂದ ಬದುಕುಳಿದವರಿಗೆ ಅಗತ್ಯ ಪರಿಹಾರ, ಪುನರ್ವಸತಿ ಮತ್ತು ಉಚಿತ ಚಿಕಿತ್ಸೆ ನೀಡುವಂತೆ ಹಿಂದಿನ ತೀರ್ಪಿನಲ್ಲಿ ನೀಡಿದ್ದ ಆದೇಶಾನುಸಾರವಾಗಿ ನಡೆದುಕೊಳ್ಳಲು ಎಲ್ಲ ರಾಜ್ಯಗಳಿಗೆ ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಮ್ ಕೋರ್ಟ್ ಸೂಚಿಸಿದೆ.

ಬಿಹಾರದ ಆಸಿಡ್ ದಾಳಿಯ ಸಂಸ್ತ್ರಸ್ತೆಯ ಪ್ರಕರಣದ ವಿಚಾರಣೆಯೊಂದನ್ನು ನಡೆಸುವಾಗ ನ್ಯಾಯಾಧೀಶರಾದ ಎಂ ವೈ ಇಕ್ಬಾಲ್ ಮತ್ತು ಸಿ ನಾಗಪ್ಪನ್ ಈ ಆದೇಶ ನೀಡಿದ್ದಾರೆ.

ಉಚಿತ ಚಿಕಿತ್ಸೆಯೊಂದಿಗೆ ಸಂಸ್ರಸ್ತೆಗೆ ೧೦ ಲಕ್ಷ ಪರಿಹಾರ ನೀಡುವಂತೆ ಬಿಹಾರ ಸರ್ಕಾರಕ್ಕೆ ಕೋರ್ಟ್ ಸೂಚಿಸಿದೆ.

ಈ ಹಿಂದಿನ ತೀರ್ಪಿನಲ್ಲಿ ತಿಳಿಸಿದಂತೆ ಸಂತ್ರಸ್ತರಿಗೆ ಅಗತ್ಯವಾದ ಎಲ್ಲ ತರಹದ ನೆರವು ನೀಡುವಂತೆ ರಾಜ್ಯಗಳಿಗೆ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ನ್ಯಾಯಪೀಠ ಹೇಳಿದೆ.

ಖಾಸಗಿ ಆಸ್ಪತ್ರೆಗಳು ಸಂತ್ರಸ್ತರಿಗೆ ಉಚಿತ ಚಿಕಿತ್ಸೆ ನೀಡಲು ಒಪ್ಪುತ್ತಿಲ್ಲ ಎಂದು ದೂರಿ ಈ ನಿಟ್ಟಿನಲ್ಲಿ ಸೂಚನೆ ನೀಡುವಂತೆ ಬಿಹಾರ ಮೂಲದ ಎನ್ ಜಿ ಒ ಪರಿವರ್ತನ ಕೇಂದ್ರ ಅಪೆಕ್ಸ್ ಕೋರ್ಟ್ ಮೊರೆ ಹೋಗಿತ್ತು.

ಈ ಹಿಂದಿನ ತೀರ್ಪಿನಲ್ಲೇ ಎಲ್ಲ ಖಾಸಗಿ ಆಸ್ಪತ್ರೆಗಳಿಗೆ ಉಚಿತ ಚಿಕಿತ್ಸೆ ಮತ್ತು ಔಷಧಗಳನ್ನು ನೀಡಲು ಆದೇಶ ಜಾರಿ ಮಾಡುವಂತೆ ಸರ್ಕಾರಗಳಿಗೆ ಕೋರ್ಟ್ ತಿಳಿಸಿತ್ತು. ಈ ಕೂಡಲೇ ಈ ವಿಷಯವನ್ನು ಖಾಸಗಿ ಆಸ್ಪತ್ರೆಗಳೊಂದಿಗೆ ಚರ್ಚಿಸುವಂತೆ ಕೋರ್ಟ್ ಈಗ ತಿಳಿಸಿದೆ.

ಆಸಿಡ್ ನ ಅನಿಯಂತ್ರಿತ ಮಾರಾಟಕ್ಕೆ ತಡೆ ಹಾಕಲು ಕೂಡ ಎಲ್ಲ ರಾಜ್ಯಗಳಿಗೆ ಕೋರ್ಟ್ ಸೂಚಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com