
ನೋಯ್ಡಾ: ಗೋಮಾಂಸ ಸೇವಿಸಿದ ಆರೋಪದ ಮೇಲೆ ಕೊಲ್ಲಲ್ಪಟ್ಟ ಉತ್ತರ ಪ್ರದೇಶದ ದಾದ್ರಿಯ ಮೊಹಮ್ಮದ್ ಇಕ್ಲಾಖ್ ಅವರ ಬಿಶಾಡಾ ಗ್ರಾಮವನ್ನು ಈಗ ಗೋಮೂತ್ರ ಮತ್ತು ಗಂಗಾಜಲದಿಂದ ಶುದ್ಧೀಕರಿಸಲಾಗಿದೆ.
ನ್ಯೂಸ್ 18 ಸುದ್ದಿ ವಾಹಿನಿಯ ವರದಿಯ ಪ್ರಕಾರ, ಸೋಮವಾರ ಇಕ್ಲಾಖ್ ಅವರ ಬಿಶಾಡಾ ಗ್ರಾಮವನ್ನು ಗೋಮೂತ್ರ ಮತ್ತು ಗಂಗಾಜಲದಿಂದ ಶುದ್ಧೀಕರಿಸಲಾಗಿದೆ.
ದಾದ್ರಿಯ ಬಿಶಾಡಾ ಗ್ರಾಮದಲ್ಲಿ ನಡೆದುಹೋಗಿರುವ ದುರದೃಷ್ಟಕರ ಘಟನೆಯಿಂದಾಗಿ ಗ್ರಾಮದ ಇಡೀ ಪರಿಸರವೇ ಅಶುದ್ಧವಾಗಿದೆ. ಆದುದರಿಂದ ಗ್ರಾಮವನ್ನು ಗೋಮೂತ್ರ ಮತ್ತು ಗಂಗಾಜಲದಿಂದ ಶಾಸ್ತ್ರೋಕ್ತವಾಗಿ ಶುದ್ಧೀಕರಿಸುವುದು ಈಗ ಅಗತ್ಯವಾಗಿದೆ ಎಂದು ಬಿಶಾಡಾ ಗ್ರಾಮದ ದೇವಸ್ಥಾನದ ಅರ್ಚಕ ಸಾಧ್ವಿ ಹರ ಸಿದ್ಧಿ ಗಿರಿ ಅವರು ಮಾಧ್ಯಮಕ್ಕೆ ತಿಳಿಸಿರುವುದಾಗಿ ವರದಿ ಮಾಡಲಾಗಿದೆ.
ಮೊಹಮ್ಮದ್ ಅಖಲಾಕ್ ಅವರ ಗುರಿ ಇರಿಸುವಂತೆ ಯಾವ ದೇವಾಲಯದಿಂದ ಮೈಕ್ ಮೂಲಕ ಘೋಷಣೆ ಹೊರಡಿಸಲಾಗಿತ್ತೋ ಆ ದೇವಾಲಯವನ್ನು ಕೂಡ ಗೋಮೂತ್ರ ಮತ್ತು ಗಂಗಾಜಲದಿಂದ ಶುದ್ಧೀಕರಿಸಲಾಗುವುದು ಎಂದು ಸಾಧ್ವಿ ಗಿರಿ ಅವರು ಹೇಳಿದ್ದಾರೆ.
ಈ ಶುದ್ಧೀಕರಣ ಪ್ರಕ್ರಿಯೆಯನ್ನು ಶಾಸ್ತ್ರೋಕ್ತವಾಗಿ ನಡೆಸುವ ಸಲುವಾಗಿ ವಾರಾಣಸಿಯ ಪವಿತ್ರ ಘಾಟ್‌ಗಳಿಂದ ಗಂಗಾಜಲ ಸಹಿತವಾಗಿ ವಾರಾಣಸಿಯ ಅರ್ಚಕರೊಬ್ಬರು ಇಲ್ಲಿಗೆ ಬಂದು ಶುದ್ಧೀಕರಣ ಪ್ರಕ್ರಿಯೆಯನ್ನು ವಿಧ್ಯುಕ್ತವಾಗಿ ನಡೆಸಿಕೊಡಲಿದ್ದಾರೆ ಎಂದು ಸಾಧ್ವಿ ಗಿರಿ ತಿಳಿಸಿದ್ದಾರೆ.
Advertisement