ಗೀತಾ ಜಯಂತಿ ಆಚರಿಸಲು ಹರಿಯಾಣ ಸರ್ಕಾರ ನಿರ್ಧಾರ

ಹರಿಯಾಣ ಸರ್ಕಾರ ಅಧಿಕೃತವಾಗಿ ಗೀತಾ ಜಯಂತಿ ಆಚರಿಸಲು ನಿರ್ಧರಿಸಿದ್ದು ಇದಕ್ಕಾಗಿ ರು.2 ಕೋಟಿ ಬಿಡುಗಡೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಚಂಡಿಗಢ: ಹರಿಯಾಣ ಸರ್ಕಾರ ಅಧಿಕೃತವಾಗಿ ಗೀತಾ ಜಯಂತಿ ಆಚರಿಸಲು ನಿರ್ಧರಿಸಿದ್ದು ಇದಕ್ಕಾಗಿ ರು.2 ಕೋಟಿ ಬಿಡುಗಡೆ ಮಾಡಲಿದೆ.
ಡಿ.19ರಿಂದ ಮೂರು ದಿನಗಳ ಕಾಲ ನಡೆಯಲಿರುವ ಗೀತಾ ಜಯಂತಿಗೆ ಪ್ರತಿಯೊಂದು ಜಿಲ್ಲೆಗೆ ರು.10 ಲಕ್ಷ ಬಿಡುಗಡೆ ಮಾಡಲಿದೆ. 
ಸಮಾಜದ ಎಲ್ಲಾ ರಂಗಗಳ ಖ್ಯಾತನಾಮರು ಹಾಗೂ ಎನ್‍ಜಿಒಗಳನ್ನು ಒಳಗೊಂಡ ಸಮಿತಿ ರಚಿಸಲಿರುವ ಆಯಾ ಜಿಲ್ಲಾಧಿಕಾರಿಗಳು, ಗೀತಾ ಜಯಂತಿಗೆ ಚಾಲನೆ ನೀಡಲಿದ್ದಾರೆ. 
ರಾಜ್ಯಮಟ್ಟದ ಗೀತಾ ಜಯಂತಿ ಆಚರಣೆಗೆಂದು ರಾಜ್ಯದ ಸಾರ್ವಜನಿಕ ಸಂಬಂಧ ಹಾಗೂ ಸಾಂಸ್ಕೃತಿಕ ಸಚಿವಾಲಯ ಬೃಹತ್ ಪ್ರದರ್ಶನವೊಂದನ್ನು ಏರ್ಪಡಿಸಿದ್ದು, ಜಯಂತಿಗೆ ಸಂಬಂಧಿಸಿದ ಎಲ್ಲಾ ವಹಿವಾಟುಗಳನ್ನು ನಿರ್ವಹಿಸಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com