
ಕೇರಳ: ನಿಶ್ಚಿತಾರ್ಥದ ನಂತರ ವರನ ಕುಟುಂಬ ವರದಕ್ಷಿಣೆ ಕೇಳಿದ್ದಕ್ಕೆ ಅಸಮಾಧಾನಗೊಂಡ ವಧು, ಮದುವೆಯನ್ನು ರದ್ದುಪಡಿಸಿರುವುದಾಗಿ ಫೇಸ್ ಬುಕ್ ನಲ್ಲಿ ಘೋಷಿಸಿರುವ ಘಟನೆ ಕೇರಳದಲ್ಲಿ ನಡೆದಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕೇರಳದ ತ್ರಿಶ್ಶೂರ್ ನಿವಾಸಿ ರಮ್ಯಾ ರಾಮಚಂದ್ರನ್, ನಿಶ್ಚಿತಾರ್ಥದ ಬಳಿಕ ಗಂಡಿನ ಕಡೆಯವರು ವರದಕ್ಷಿಣೆ ನೀಡುವಂತೆ ಬೇಡಿಕೆ ಇಟ್ಟಿರುವುದಾಗಿ, ಅದಕ್ಕೆ ತಾನು ಮದುವೆ ರದ್ದುಗೊಳಿಸಿರುವುದಾಗಿ ತನ್ನ ಫೇಸ್ ಬುಕ್ ಫೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.
ನಿಶ್ಚಿತಾರ್ಥಕ್ಕೂ ಮುನ್ನ ಹಣ, ಚಿನ್ನ ಏನೂ ಬೇಡ ಎಂದು ಹೇಳಿದ್ದ. ಆದರೆ ನಿಶ್ಚಿತಾರ್ಥವಾದ ಮೇಲೆ 50 ಸೌರನ್ ಚಿನ್ನ, 5 ಲಕ್ಷ ರೂಪಾಯಿ ನಗದು ನೀಡಬೇಕೆಂದು ಬೇಡಿಕೆ ಇಟ್ಟಿರುವುದಾಗಿ ಯುವತಿ ತಿಳಿಸಿರುವುದಾಗಿ, ವರದಕ್ಷಿಣೆ ಸಂಪ್ರದಾಯಕ್ಕೆ ವಿರೋಧಿಯಾಗಿರುವ ತಾನು ಇದನ್ನೂ ವಿರೋಧಿಸಿ ಮದುವೆಯನ್ನು ರದ್ದುಪಡಿಸಿರುವುದಾಗಿ ಫೇಸ್ ಬುಕ್ ನಲ್ಲಿ ರಮ್ಯಾ ಸ್ಪಷ್ಟಪಡಿಸಿದ್ದಾರೆ.
Advertisement