
ನವದೆಹಲಿ: ಜನವರಿ 10ರಿಂದ ದೆಹಲಿ ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಸಮ-ಬೆಸ ವಾಹನ ಸಂಚಾರ ನಿಯಮದಿಂದ ಒಂಟಿ ಮಹಿಳಾ ಚಾಲಕರಿಗೆ ವಿನಾಯಿತಿ ಇದೆ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹೇಳಿದ್ದಾರೆ.
ಗೃಹ ಸಚಿವ ರಾಜ ನಾಥ್ ಸಿಂಗ್ ಭೇಟಿ ಮಾಡಿದ ನಂತರ ಮಾತನಾಡಿದ ಅರವಿಂದ್ ಕೇಜ್ರಿವಾಲ್ ಸಮ-ಬೆಸ ಸಂಖ್ಯೆ ವಾಹನ ಸಂಚಾರದಿಂದ ಏಕ ಮಹಿಳಾ ಚಾಲಕರು ಹಾಗೂ ರೋಗಿಗಳನ್ನು ಹೊರಗಿಡಲಾಗುತ್ತದೆ ಎಂದು ಹೇಳಿದರು.
ಇನ್ನು ಪೊಲೀಸ್ ಹಾಗೂ ಆಂಬುಲೆನ್ಸ್ ವಾಹನಗಳಿಗೂ ಈ ನಿಯಮ ಅನ್ವಯವಾಗುವುದಿಲ್ಲ ಎಂದ ಅವರು, ಅಧಿಕಾರಿಗಳು ಮತ್ತು ಮಂತ್ರಿಗಳಿಗೆ ಈ ರಿಯಾಯಿತಿ ಇರುವುದಿಲ್ಲ ಎಂದು ಹೇಳಿದ್ದಾರೆ.
ದೆಹಲಿಯಲ್ಲಿ ವಾಯುಮಾಲಿನ್ಯ ನಿಯಂತ್ರಿಸಲು ಹೊಸ ವರ್ಷದಿಂದ ಸಮ-ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮವನ್ನು ಜಾರಿಗೆ ತರಲು ದೆಹಲಿ ಸರ್ಕಾರ ನಿರ್ಧರಿಸಿದೆ. ಭಾನುವಾರ ಮಾತ್ರ ಎಲ್ಲಾ ವಾಹನಗಳು ಸಂಚಾರ ಮಾಡಲು ಅವಕಾಶವಿದೆ.
Advertisement