
ನವದೆಹಲಿ: ಗ್ರಾಹಕ ಸ್ನೇಹಿಯಾಗಿರುವ ಅಂಶಗಳನ್ನು ಒಳಗೊಂಡ ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ಧಿ) ಮಸೂದೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿದೆ.
ಈ ಹಿಂದೆ ಯುಪಿಎ ಸರ್ಕಾರ ರೂಪಿಸಿದ್ದ ಮಸೂದೆ ಅನ್ವಯ, ರಿಯಲ್ ಎಸ್ಟೇಟ್ ಉದ್ಯಮಿಗಳು ಯಾವುದೇ ಯೋಜನೆ ಆರಂಭಕ್ಕೂ ಮುನ್ನ ಯೋಜನಾ ವೆಚ್ಚದ ಶೇಕಡಾ 70ರಷ್ಟನ್ನು ಪ್ರತ್ಯೇಕ ಖಾತೆಯಲ್ಲಿ ಇಡಬೇಕಾಗಿತ್ತು. ನಂತರ ಬಂದ ಎನ್ ಡಿಎ ಸರ್ಕಾರ ಈ ಮೊತ್ರವನ್ನು ಶೇಕಡಾ 50ಕ್ಕೆ ಇಳಿಸಿತ್ತು. ಬಳಿಕ ವಿರೋಧದ ಹಿನ್ನೆಲೆಯಲ್ಲಿ ಕರಡು ಮಸೂದೆಯನ್ನು ಆಯ್ಕೆ ಸಮಿತಿಗೆ ವಹಿಸಲಾಗಿತ್ತು. ಆಯ್ಕೆ ಸಮಿತಿ ಕೆಲವೊಂದು ಅಂಶಗಳನ್ನು ಸೇರಿಸಿತ್ತಾದರೂ, ಠೇವಣಿ ಮೊತ್ತವನ್ನು ಶೇಕಡಾ 50ರಲ್ಲೇ ಇಟ್ಟಿತ್ತು. ಆದರೆ ನಿನ್ನೆ ಸಂಪುಟ ಅಂಗೀಕರಿಸಿದ ಮಸೂದೆಯಲ್ಲಿ ಠೇವಣಿ ಮೊತ್ತವನ್ನು ಶೇಕಡಾ 70ಕ್ಕೆ ಹೆಚ್ಚಿಸಲಾಗಿದೆ.
Advertisement