ಚೆನ್ನೈ ಜಲಪ್ರಳಯದ ವೇಳೆ 90 ಗಂಟೆಗಿಂತಲೂ ಹೆಚ್ಚು ಹೊತ್ತು ಕೆಲಸ ಮಾಡಿ 13 ಕಂದಮ್ಮಗಳ ಹೆರಿಗೆಗೆ ಸಹಾಯ ಮಾಡಿದ ವೈದ್ಯೆ

ಅದರಲ್ಲಿ 13 ಕಂದಮ್ಮಗಳ ಹೆರಿಗೆ ಸುಸೂತ್ರವಾಗಿ ನಡೆಯುವಂತೆ ಮಾಡಿದವರು ಡಾ. ಪದ್ಮ ಪ್ರಿಯ. 90 ಗಂಟೆಗಳಿಗಂತಲೂ ಹೆಚ್ಚು ಕಾಲ ಕೆಲಸ ಮಾಡಿ, ಇಲ್ಲಿನ ವೈದ್ಯರುಗಳು...
ಡಾ. ಪದ್ಮ ಪ್ರಿಯಾ
ಡಾ. ಪದ್ಮ ಪ್ರಿಯಾ
ಚೆನ್ನೈ: ವೈದ್ಯೋ ನಾರಾಯಣೋ ಹರಿಃ ಎಂಬ ಮಾತು ಇಲ್ಲಿ ನಿಜಕ್ಕೂ ಸತ್ಯವಾಗಿತ್ತು. ಚೆನ್ನೈ ನಗರ ಜಲಪ್ರಳಯಕ್ಕೆ ತುತ್ತಾದ ಆ ಹೊತ್ತು ಡಾ. ಪದ್ಮ ಪ್ರಿಯಾ ಅಪೋಲೋ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕಾರ್ಯನಿರತರಾಗಿದ್ದರು.
ಅಪೋಲೋ ಆಸ್ಪತ್ರೆಯಲ್ಲಿ ಕಳೆದ ಶುಕ್ರವಾರದಿಂದ ಭಾನುವಾರವರಗೆ ಒಟ್ಟು 17 ನವಜಾತ ಶಿಶುಗಳು ಜನಿಸಿವೆ. ಅದರಲ್ಲಿ 13 ಕಂದಮ್ಮಗಳ ಹೆರಿಗೆ ಸುಸೂತ್ರವಾಗಿ ನಡೆಯುವಂತೆ ಮಾಡಿದವರು ಡಾ. ಪದ್ಮ ಪ್ರಿಯ. 90 ಗಂಟೆಗಳಿಗಂತಲೂ ಹೆಚ್ಚು ಕಾಲ ಕೆಲಸ ಮಾಡಿ, ಇಲ್ಲಿನ ವೈದ್ಯರುಗಳು ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡರು. 
ಡಾ. ಪದ್ಮಪ್ರಿಯ ಸೇರಿದಂತೆ ಇತರ ಸರ್ಜನ್ ಮತ್ತು ಟೆಕ್ನಿಶನ್ ಗಳು ಆ ದಿನಗಳಲ್ಲಿ ನಿರಂತರ ಕೆಲಸ ಮಾಡಿದರು. ಜಲಪ್ರಳಯದಿಂದಾಗಿ ಎಟಿಎಂ ವರ್ಕ್ ಆಗುತ್ತಿರಲಿಲ್ಲ. ಆಸ್ಪತ್ರೆಯಲ್ಲಿ ಶುಶ್ರೂಷೆ ಪಡೆಯುತ್ತಿರುವವರಿಗೆ ಆರ್ಥಿಕ ಸಂಕಷ್ಟ ಬೇರೆ. ಆ್ಯಂಬುಲೆನ್ಸ್‌ಗೆ ಕೂಡಾ ಹೋಗುವುದಕ್ಕೆ ಕಷ್ಟವಿತ್ತು. ಆ ಹೊತ್ತಲ್ಲಿ ನಾವು ರೋಗಿಗಳಿಗೆ ಧೈರ್ಯ ತುಂಬಿದೆವು. ಹಣದ ಅಡಚಣೆಯಿಂದಾಗಿ ಅವರ ಚಿಕಿತ್ಸೆಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ನೋಡಿಕೊಂಡೆವು. ಅವರಿಗೆ ಬೇಕಾದ ಎಲ್ಲ ಸಹಾಯಗಳನ್ನು ಮಾಡಿ ಕೊಟ್ಟೆವು. ಅಗತ್ಯ ಬಂದಾಗ ಅಂಬ್ಯುಲೆನ್ಸ್ ಕಳಿಸಿ ಕೊಟ್ಟು ಅವರನ್ನು ಆಸ್ಪತ್ರೆಗೆ ಸಾಗಿಸುವ ಕಾರ್ಯಗಳನ್ನೂ ಮಾಡಿದೆವು ಎಂದು ಡಾ. ಪದ್ಮ ಪ್ರಿಯ ಸುದ್ದಿ ಮಾಧ್ಯಮವೊಂದರಲ್ಲಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com