26 /11 ಮುಂಬೈ ದಾಳಿಯ ರುವಾರಿ ಡೇವಿಡ್ ಹೆಡ್ಲಿಯನ್ನು ಮಾಫಿ ಸಾಕ್ಷಿಯಾಗಿ ಪರಿಗಣಿಸಲು ಕೋರ್ಟ್ ಒಪ್ಪಿಗೆ

26 /11 ಮುಂಬೈ ದಾಳಿಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಡೇವಿಡ್ ಕೋಲ್ಮನ್ ಹೆಡ್ಲಿ ಯನ್ನು ಪ್ರಾಸಿಕ್ಯೂಶನ್ ಸಾಕ್ಷಿಯಾಗಿ(ಅಪ್ರೂವರ್) ಪರಿಗಣಿಸಲು ಮುಂಬೈ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಡೇವಿಡ್ ಹೆಡ್ಲಿ
ಡೇವಿಡ್ ಹೆಡ್ಲಿ

ಮುಂಬೈ: 26 /11 ಮುಂಬೈ ದಾಳಿಯ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿರುವ ಡೇವಿಡ್ ಕೋಲ್ಮನ್ ಹೆಡ್ಲಿ ಯನ್ನು ಪ್ರಾಸಿಕ್ಯೂಶನ್ ಸಾಕ್ಷಿಯಾಗಿ(ಅಪ್ರೂವರ್) ಪರಿಗಣಿಸಲು ಮುಂಬೈ ಕೋರ್ಟ್ ಒಪ್ಪಿಗೆ ಸೂಚಿಸಿದೆ.
ಕ್ಷಮಾದಾನ ನೀಡಿ, ತಪ್ಪೊಪ್ಪಿಗೆಗೆ ಅವಕಾಶ ನೀಡಲು ಡೇವಿಡ್ ಹೆಡ್ಲಿಗೆ ಅನುಮತಿ ನೀಡಿರುವ ನ್ಯಾಯಾಲಯ ಕೆಲವು ಷರತ್ತುಗಳನ್ನು ವಿಧಿಸಿದೆ. ಯುಎಸ್ ನಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ಡೇವಿಡ್ ಹೆಡ್ಲಿ ಮುಂಬೈ ನ್ಯಾಯಾಲಯದ ವಿಚಾರಣೆ ಎದುರಿಸಿದ್ದ ಹೆಡ್ಲಿ, ಅಪ್ರೂವರ್ ಆಗಲು ಒಪ್ಪಿರುವುದನ್ನು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಉಜ್ವಲ್ ನಿಕ್ಕಂ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
26 /11 ಮುಂಬೈ ದಾಳಿಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಪಾಕಿಸ್ತಾನಿ-ಅಮೆರಿಕನ್ ಲಷ್ಕರ್ ಉಗ್ರ ಡೇವಿಡ್ ಕೋಲ್ಮನ್ ಹೆಡ್ಲಿ, ಯುಎಸ್ ನಲ್ಲಿ 35 ವರ್ಷಗಳ ಜೈಲು ಶಿಕ್ಷೆ ಅನುಭವಿಸುತ್ತಿದ್ದಾನೆ. ಮುಂಬೈ ಕೋರ್ಟ್ ನಲ್ಲಿ ನನ್ನ ವಿರುದ್ಧ ಸಲ್ಲಿಸಲಾಗಿರುವ ಆರೋಪಪಟ್ಟಿಯನ್ನು ಪಡೆದಿದ್ದೇನೆ, ಯುಎಸ್ ನಲ್ಲಿ ಯಾವ ಆರೋಪ ಹೊರಿಸಲಾಗಿದೆಯೋ ಮುಂಬೈ ನ್ಯಾಯಾಲಯದಲ್ಲೂ ಅದೇ ಆರೋಪವನ್ನು ಹೊರಿಸಲಾಗಿದೆ. ಈ ಆರೋಪಗಳಲ್ಲಿ ನನ್ನನ್ನು ದೋಷಿಯೆಂದು ಯುಎಸ್ ನ್ಯಾಯಾಲಯ ತೀರ್ಪು ನೀಡಿದ್ದು ನಾನು ಅಪರಾಧದಲ್ಲಿ ಭಾಗಿಯಾಗಿದ್ದೆ ಎಂದು ತಪ್ಪೊಪ್ಪಿಕೊಂಡಿದ್ದೆ ಎಂದು ಹೇಡ್ಲಿ ಹೇಳಿದ್ದಾನೆ.
ಕ್ಷಮಾದಾನ ನೀಡುವುದಾದರೆ ಅಪ್ರೂವರ್ ಆಗಿ ತಪ್ಪೊಪ್ಪಿಕೊಳ್ಳಲು ಸಿದ್ಧ ಎಂದು ಡೇವಿಡ್ ಹೆಡ್ಲಿ ಮುಂಬೈ ನ್ಯಾಯಾಲಯಕ್ಕೆ ಮನವಿ ಮಾಡಿದ್ದ. ಈ ಮನವಿಯನ್ನು ನ್ಯಾಯಾಲಯ ಪುರಸ್ಕರಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com