
ನವದೆಹಲಿ: ಉತ್ತರಾಖಂಡ್ ನ ಕುಡಿಯಾಳ, ಹೃಷಿಕೇಶ, ಹಾಗೂ ಗಂಗಾ ನದಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ನಿಷೇಧಿಸಿ ರಾಷ್ಟ್ರೀಯ ಹಸಿರು ನ್ಯಾಯಪೀಠ ಆದೇಶ ಹೊರಡಿಸಿದೆ.
ಗಂಗಾ ನದಿ ಮಲಿನವಾಗುವುದನ್ನು ಕಡಿಮೆ ಮಾಡಲು ಪ್ಲಾಸ್ಟಿಕ್ ನಿಷೇಧಕ್ಕೆ ಆದೇಶ ಹೊರಡಿಸಿರುವ ನ್ಯಾಯಮಂಡಳಿ ಈ ಕ್ಷಣದಿಂದಲೇ ಜಾರಿಗೆ ಬರುವಂತೆ ಸೂಚಿಸಿದೆ.
ಗಂಗಾ ನದಿ ಜೊತೆಗೆ ಗೋಮುಖ್ ದಿಂದ ಹರಿದ್ವಾರದ ವರೆಗೆ ಸಂಪೂರ್ಣ ಪ್ಲಾಸ್ಟಿಕ್ ನಿಷೇಧಿಸಿದೆ. ಫೆಬ್ರವರಿ 1 2016 ರಿಂದ ಈ ನಿಯಮ ಜಾರಿಗೆ ಬರಲಿದೆ.
ಗಂಗಾ ನದಿಯಲ್ಲಿ ರಿವರ್ ರ್ಯಾಫ್ಟಿಂಗ್ ಚಟುವಟಿಕೆಯಿಂದ ಮಾಲಿನ್ಯ ಉಂಟಾಗುವುದಿಲ್ಲ ಎಂದು ಪೀಠ ಅಭಿಪ್ರಾಯ ಪಟ್ಟಿದೆ.
Advertisement