
ಮುಂಬೈ: ಬಾಲಿವುಡ್ ನಟಿ ಜಿಯಾ ಖಾನ್ ಸಾವಿನ ಕುರಿತಂತೆ ಸಿಬಿಐ ಸಲ್ಲಿಸಿದ್ದ ಆರೋಪ ಪಟ್ಟಿಯಲ್ಲಿ ನಟಿಯ ಗರ್ಭಧಾರಣೆಗೆ ಸಂಬಂಧಪಟ್ಟ ಹಲವು ವಿಷಯಗಳನ್ನು ಹೊಂದಿದೆ. ಆಕೆಯ ಬಾಯ್ ಫ್ರೆಂಡ್ ಸೂರಜ್ ಪಂಚೋಲಿ ಗರ್ಭಪಾತ ಮಾಡಿಸಿಕೊಳ್ಳಲು ನೆರವಾಗಿದ್ದು, ಗರ್ಭಪಾತ ಮಾಡಿಸಿಕೊಂಡ ನಂತರ ಭಾವನಾತ್ಮಕವಾಗಿ ಆಕೆ ಕ್ಷೋಭೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದೆಂದು ಆರೋಪ ಪಟ್ಟಿಯಲ್ಲಿ ವಿವರಿಸಲಾಗಿದೆ.
ಮುಂಬೈ ಹೈಕೋರ್ಟ್ ನ ವಿಶೇಷ ಅಪರಾಧ ವಿಭಾಗ ಜಿಯಾ ಖಾನ್ ನದ್ದು ಆತ್ಮಹತ್ಯೆ ಮತ್ತು ಇದಕ್ಕೆ ಪಂಚೋಲಿ ವಿರುದ್ಧ ಆತ್ಮಹತ್ಯೆ ಕುಮ್ಮಕ್ಕು ಕೇಸು ದಾಖಲಿಸುವ ಸಾಧ್ಯತೆಯಿದೆ.
ಜಿಯಾ ಖಾನ್ ಸಾವಿನ ನಂತರ ಮುಂಬೈ ಹೈಕೋರ್ಟ್ ಮೆಟ್ಟಿಲೇರಿದ್ದ ಆಕೆಯ ತಾಯಿ ರಬಿಯಾ ಖಾನ್, ತಮ್ಮ ಮಗಳ ಸಾವಿನಲ್ಲಿ ಯಾರೋ ಅನ್ಯಾಯವೆಸಗಿದ್ದಾರೆ ಎಂದು ದೂರು ನೀಡಿ ದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಸಿಬಿಐಗೆ ತನಿಖೆಗೆ ಆದೇಶಿಸಿತ್ತು.
ನಿನ್ನೆ ಸೆಷನ್ಸ್ ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಸಿಬಿಐ ಜಿಯಾ ಖಾನ್ ನ ಗರ್ಭಪಾತದ ಹಿಂದೆ ಸೂರಜ್ ಪಂಚೋಲಿಯ ಪಾತ್ರವಿರುವುದು ತಿಳಿದುಬರುತ್ತದೆ. ಜಿಯಾ ತಾನು ಗರ್ಭವತಿ ಎಂಬುದನ್ನು ಗರ್ಭವತಿಯಾಗಿ ನಾಲ್ಕು ವಾರಗಳ ನಂತರ ಹೇಳಿದ್ದಳು. ನಂತರ ಅವರಿಬ್ಬರೂ ವೈದ್ಯರನ್ನು ಭೇಟಿಯಾಗಿ ಗರ್ಭಪಾತ ಮಾಡಿಸಿಕೊಳ್ಳಲು ಮಾತ್ರೆಯನ್ನು ತೆಗೆದುಕೊಂಡಿದ್ದರು. ಆದರೆ ಅದು ಸಹಾಯವಾಗಲಿಲ್ಲ. ನಂತರ ಮತ್ತೊಬ್ಬ ಸ್ತ್ರೀ ರೋಗ ವೈದ್ಯರನ್ನು ಭೇಟಿ ಮಾಡಿ ಮಾತ್ರೆ ತೆಗೆದುಕೊಂಡಿದ್ದರು.
ಮಾತ್ರೆ ತೆಗೆದುಕೊಂಡ ನಂತರ ರಕ್ತಸ್ರಾವವಾವಾಯಿತು. ಜಿಯಾ ಖಾನ್ ಸೂರಜ್ ಪಂಚೋಲಿಯನ್ನು ಸಹಾಯಕ್ಕೆ ಕರೆದಳು. ಆತ ವೈದ್ಯರನ್ನು ಕರೆದಾಗ ವೈದ್ಯರು ಬಂದು ಪರೀಕ್ಷಿಸಿ ಆಸ್ಪತ್ರೆಗೆ ದಾಖಲಾಗುವಂತೆ ಸೂಚಿಸಿದ್ದರು. ಆದರೆ ಜಿಯಾ ಖಾನ್ ಆಸ್ಪತ್ರೆಗೆ ದಾಖಲಾದರೆ ವಿಷಯ ಸಾರ್ವಜನಿಕವಾಗಿ ಗೊತ್ತಾಗುತ್ತದೆ ಎಂದು ಭಾವಿಸಿದ ಸೂರಜ್ ಪಂಚೋಲಿ ಆಸ್ಪತ್ರೆಗೆ ದಾಖಲಿಸಲಿಲ್ಲ. ತಾನೇ ಪರಿಸ್ಥಿತಿಯನ್ನು ನಿಭಾಯಿಸಿದನು.ಭ್ರೂಣವನ್ನು ತನ್ನ ಕೈಯಲ್ಲೇ ಸ್ವಚ್ಛಗೊಳಿಸಿ ಪಕ್ಕದಲ್ಲಿದ್ದ ಶೌಚಾಲಯಕ್ಕೆ ಎಸೆದನು ಎಂದು ಸಿಬಿಐ ವಿವರಿಸಿದೆ.
ಈ ಘಟನೆಯ ನಂತರ ಜಿಯಾ ಖಾನ್ ತೀವ್ರ ಒತ್ತಡಕ್ಕೆ ಒಳಗಾಗಿದ್ದಳು. ಸೂರಜ್ ಪಂಚೋಲಿ ಆಕೆಯ ಜೀವನದಿಂದ ಇಷ್ಟು ಹೊತ್ತಿಗೆ ಹೊರಬಂದಿದ್ದ. ಈ ಎಲ್ಲಾ ಘಟನೆಗಳು ಜಿಯಾ ಖಾನ್ ಆತ್ಮಹತ್ಯೆ ಮಾಡಿಕೊಳ್ಳಲು ಪ್ರೇರೇಪಿಸಿತು ಎಂದು ಸಿಬಿಐ ಚಾರ್ಜ್ ಶೀಟ್ ನಲ್ಲಿ ವಿವರಿಸಿದೆ.
Advertisement