ಸೋನಿಯಾ ಗಾಂಧಿಯಿಂದ ಕಾಂಗ್ರೆಸ್ ಸಂಸದೀಯ ಸ್ಥಾನ ಕೈ ತಪ್ಪಿತು: ಶರದ್ ಪವಾರ್

ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿದೇಶಿ ಮೂಲ ಮತ್ತು ತಮ್ಮ ನಿರ್ಧಾರಗಳನ್ನು ಕಾಂಗ್ರೆಸ್ ತಳ್ಳಿ ಹಾಕಿದ್ದು, ಕಾಂಗ್ರೆಸ್ ಸಂಸದೀಯ...
ದೆಹಲಿಯ ವಿಜ್ಞಾನ ಭವನದಲ್ಲಿ ಬಿಡುಗಡೆಗೊಂಡ ಶರದ್ ಪವಾರ್ ಅವರ ಆತ್ಮಚರಿತ್ರೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನ ಮಂತ್ರಿ ನರ
ದೆಹಲಿಯ ವಿಜ್ಞಾನ ಭವನದಲ್ಲಿ ಬಿಡುಗಡೆಗೊಂಡ ಶರದ್ ಪವಾರ್ ಅವರ ಆತ್ಮಚರಿತ್ರೆ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ, ಉಪ ರಾಷ್ಟ್ರಪತಿ ಹಮೀದ್ ಅನ್ಸಾರಿ, ಪ್ರಧಾನ ಮಂತ್ರಿ ನರ
Updated on

ನವದೆಹಲಿ: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿಯವರ ವಿದೇಶಿ ಮೂಲ ಮತ್ತು ತಮ್ಮ ನಿರ್ಧಾರಗಳನ್ನು ಕಾಂಗ್ರೆಸ್ ತಳ್ಳಿ ಹಾಕಿದ್ದು, ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕನ ಸ್ಥಾನವನ್ನು ನಿರಾಕರಿಸಿದ್ದು, ಇದರಿಂದಾಗಿ ತಾವು ಎನ್ ಸಿಪಿ ಸ್ಥಾಪಿಸಿದ್ದು ಮೊದಲಾದ ಎಲ್ಲಾ ಅಂಶಗಳನ್ನು ಎನ್ ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ಆತ್ಮ ಚರಿತ್ರೆಯಲ್ಲಿ ವಿವರಿಸಿದ್ದಾರೆ.

ನಿನ್ನೆ ದೆಹಲಿಯ ವಿಜ್ಞಾನ ಭವನದಲ್ಲಿ ಎನ್ ಸಿಪಿ ಮುಖ್ಯಸ್ಥ ಶರದ್ ಪವಾರ್ ಅವರ 75ನೇ ಹುಟ್ಟುಹಬ್ಬದ ಅಂಗವಾಗಿ ಅವರು ಬರೆದ ಆತ್ಮಚರಿತ್ರೆ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು. ಸೋನಿಯಾ ಗಾಂಧಿಯವರಿಗೆ ತಕ್ಕಂತೆ ಕಾಂಗ್ರೆಸ್ ಸಂಸದೀಯ ಪಕ್ಷದ ಸಂವಿಧಾನವನ್ನು ತಿದ್ದುಪಡಿ ಮಾಡಲಾಯಿತು ಎಂದು ಶರದ್ ಪವಾರ್ ಅವರು 'ಆನ್ ಮೈ ಟರ್ಮ್-ಫ್ರಮ್ ದ ಗ್ರಾಸ್ ರೂಟ್ಸ್ ಟು ದ ಕಾರಿಡಾರ್ಸ್ ಆಫ್ ಪವರ್' ಪುಸ್ತಕದಲ್ಲಿ ವಿವರಿಸಿದ್ದಾರೆ.

ನನಗೆ ಕಾಂಗ್ರೆಸ್ ಪಕ್ಷದ ನಿರ್ಧಾರದಿಂದ ಬಹಳ ನೋವಾಗಿತ್ತು. ನಾನು ಲೋಕಸಭೆಗೆ ಆಯ್ಕೆಯಾದ ಅಭ್ಯರ್ಥಿಯಾಗಿದ್ದೆ. ಸಹಜವಾಗಿ ಕಾಂಗ್ರೆಸ್ ಸಂಸದೀಯ ಪಕ್ಷದ ನಾಯಕ ಸ್ಥಾನದ ಹಕ್ಕುದಾರನಾಗಿದ್ದೆ. ಆದರೆ ನನಗೆ ಆ ಸ್ಥಾನ ನಿರಾಕರಿಸಿದ್ದು ನನ್ನ ಮತ್ತು ಸೋನಿಯಾ ಗಾಂಧಿ ಮಧ್ಯೆ ಅಂತರ ಹೆಚ್ಚಾಗುವಂತೆ ಮಾಡಿತು. ಅವರು ನನ್ನ ನಿರ್ಧಾರಗಳನ್ನೆಲ್ಲಾ ತಳ್ಳಿಹಾಕಲು ಯತ್ನಿಸಿದಾಗ ಪರಿಸ್ಥಿತಿ ಇನ್ನೂ ಉಲ್ಭಣಿಸಿತು. ನಾವಿಬ್ಬರು ಯಾವುದಾದರೊಂದು ವಿಷಯಗಳ ಬಗ್ಗೆ ಪರಸ್ಪರ ಚರ್ಚಿಸಿ ತೀರ್ಮಾನಕ್ಕೆ ಬಂದರೆ ಅವರು ಅದಕ್ಕೆ ವಿರುದ್ಧವಾಗಿಯೇ ನಡೆದುಕೊಳ್ಳುತ್ತಿದ್ದರು ಎಂದಿದ್ದಾರೆ.

1999, ಏಪ್ರಿಲ್ 17ರಂದು ವಾಜಪೇಯಿ ಸರ್ಕಾರ ಬಿದ್ದು ಹೋದಾಗ ಅಂದಿನ ರಾಷ್ಟ್ರಪತಿ ಕೆ.ಆರ್.ನಾರಾಯಣನ್ ಅವರನ್ನು ಸೋನಿಯಾ ಗಾಂಧಿಯವರು 4 ದಿನ ಕಳೆದು ಏಪ್ರಿಲ್ 21ರಂದು ಸರ್ಕಾರ ರಚಿಸಲು ಅವಕಾಶ ನೀಡುವಂತೆ ಕೋರಲು ಭೇಟಿಯಾದರು.ಆಗ ಅವರು ರಾಷ್ಟ್ರಪತಿಯವರ ಬಳಿ ನಾವು 272 ಸದಸ್ಯರಿದ್ದು, ಇನ್ನಷ್ಟು ಸದಸ್ಯರು ನಮ್ಮ ಪಕ್ಷಕ್ಕೆ ಸೇರಿಕೊಳ್ಳುತ್ತಾರೆ ಎಂದರು. ಆದರೆ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಅವರು ಬೆಂಬಲ ನೀಡದಿದ್ದಾಗ ಸರ್ಕಾರ ರಚಿಸಲು ಅವರಿಗೆ ಸಾಧ್ಯವಾಗಲಿಲ್ಲ.
 
ಆಗ ನಾನು ಲೋಕಸಭಾ ಸದಸ್ಯನಾಗಿದ್ದು, ಕಾಂಗ್ರೆಸ್ ಪಕ್ಷದ ಹಿರಿಯ ನಾಯಕನಾಗಿದ್ದರೂ ರಾಷ್ಟ್ರಪತಿಯವರನ್ನು ಭೇಟಿ ಮಾಡುವ ಮೊದಲು ಸೋನಿಯಾ ಗಾಂಧಿಯವರಿಗೆ ನನ್ನ ಸಲಹೆ ಪಡೆಯಬೇಕೆಂದೆನಿಸಲಿಲ್ಲ ಎಂದು ಶರದ್ ಪವಾರ್ ಆರೋಪಿಸಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com