ಮುಂಬೈ: ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಸಿದ್ಧ ಕಲಾವಿದೆ ಹೇಮಾ ಉಪಾಧ್ಯಯ ಪರ ವಾದ ಮಂಡಿಸುತ್ತಿದ್ದ ವಕೀಲ ಹರ್ಷ ಭಂಬಾನಿ ಹಾಗೂ ಹೇಮಾ ಮೃತದೇಹ ಪೆಟ್ಟಿಗೆಯಲ್ಲಿ ಮುಚ್ಚಿದ ಸ್ಥಿತಿಯಲ್ಲಿ ಮುಂಬೈ ಕಾಂದಿವಲಿಯ ಚರಂಡಿಯಲ್ಲಿ ಪತ್ತೆಯಾಗಿದೆ.
ಹೇಮಾ ಹಾಗೂ ಹರ್ಷ ಅವರ ಮೃತದೇಹಗಳನ್ನು ಪ್ಲಾಸ್ಟಿಕ್ ಶೀಟ್ ಗಳ ಮೂಲಕ ಮುಚ್ಚಿ ಪೆಟ್ಟಿಗೆಯೊಳಗೆ ಹಾಕಿ ಚರಂಡಿಗೆ ಎಸೆಯಲಾಗಿತ್ತು. ನಿನ್ನೆ ಮೃತದೇಹಗಳು ಪತ್ತೆಯಾಗಿದ್ದು ಇಂದು ಗುರುತು ಪತ್ತೆ ಹಚ್ಚಲಾಗಿದೆ.
2013ರಲ್ಲಿ ಹೇಮಾ ಅವರು ತಮ್ಮ ಪತಿ ಕಲಾವಿದ ಚಿಂತನ್ ಉಪಾಧ್ಯಯ ಅವರ ವಿರುದ್ಧ ದೌರ್ಜನ್ಯ ಪ್ರಕರಣ ದಾಖಲಿಸಿದ್ದರು. ಹೇಮಾ ತಮ್ಮ ದೂರಿನಲ್ಲಿ ಮುಂಬೈನ ತನ್ನ ಅಪಾರ್ಟ್ ಮೆಂಟ್ ಗೋಡೆಗಳ ಮೇಲೆ ಚಿಂತನ್ ಅಶ್ಲೀಲ ಚಿತ್ರಗಳನ್ನು ಬಿಡಿಸುತ್ತಿದ್ದಾರೆ ಎಂದು ಆರೋಪಿಸಿದ್ದರು.
1998ರಲ್ಲಿ ಹೇಮಾ ಮತ್ತು ಚಿಂತನ್ ದಾಂಪತ್ಯ ಜೀವನಕ್ಕೆ ಕಾಲಿಸಿದ್ದು, 2010ರಲ್ಲಿ ವಿಚ್ಛೇಧನೆಗೆ ಅರ್ಜಿ ಸಲ್ಲಿಸಿದ್ದರು.