ಮುಖ್ಯ ಪರೀಕ್ಷೆಗೆ ಇ-ಪ್ರವೇಶ ಪತ್ರ: ಯುಪಿಎಸ್ ಸಿ

ಈ ವರ್ಷದ ನಾಗರಿಕ ಸೇವಾ ಮುಖ್ಯ ಪರೀಕ್ಷೆಗೆ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ನೀಡುವುದಿಲ್ಲ, ಅವರೇ ಸ್ವತಃ ಯುಪಿಎಸ್ ಸಿ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ಈ ವರ್ಷದ ನಾಗರಿಕ ಸೇವಾ ಮುಖ್ಯ ಪರೀಕ್ಷೆಗೆ ಅಭ್ಯರ್ಥಿಗಳಿಗೆ ಪ್ರವೇಶ ಪತ್ರಗಳನ್ನು ನೀಡುವುದಿಲ್ಲ, ಅವರೇ ಸ್ವತಃ ಯುಪಿಎಸ್ ಸಿ ವೆಬ್ ಸೈಟ್ ನಿಂದ ಪ್ರವೇಶ ಪತ್ರವನ್ನು ಡೌನ್ ಲೋಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬೇಕು ಎಂದು ಆಯೋಗ ತಿಳಿಸಿದೆ.

ಕೇಂದ್ರ ನಾಗರಿಕ ಸೇವಾ ಆಯೋಗದ ಮುಖ್ಯ ಪರೀಕ್ಷೆ ದೇಶದ 23 ಕೇಂದ್ರಗಳಲ್ಲಿ ಇದೇ 18ರಿಂದ 23ರವರೆಗೆ ನಡೆಯಲಿದೆ. ಆಯೋಗದ ವೆಬ್ ಸೈಟ್ ವಿಳಾಸ www.upsc.gov.in ನಲ್ಲಿ ಇ-ಪ್ರವೇಶ ಪತ್ರವನ್ನು ಅಪ್ ಲೋಡ್ ಮಾಡಲಾಗಿದೆ. ಅಲ್ಲಿಂದ ಅಭ್ಯರ್ಥಿಗಳು ಪ್ರವೇಶ ಪತ್ರಗಳನ್ನು ಡೌನ್ ಲೋಡ್ ಮಾಡಿಕೊಂಡು ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು. ಅಭ್ಯರ್ಥಿಗಳು ತಮ್ಮ ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆಗೆ ಹಾಜರಾಗುವಾಗ ಕಂಪ್ಯೂಟರ್ ನಿಂದ ಡೌನ್ ಲೋಡ್ ಮಾಡಿಕೊಂಡ ಪ್ರವೇಶ ಪತ್ರವನ್ನು ತೋರಿಸಬೇಕು.

ಇ-ಪ್ರವೇಶ ಪತ್ರದಲ್ಲಿ ಅಭ್ಯರ್ಥಿಯ ಭಾವಚಿತ್ರ ಕಾಣಿಸದಿದ್ದರೆ ಪರೀಕ್ಷೆಗೆ ಹಾಜರಾಗುವಾಗ ಸೂಕ್ತ ಗುರುತು ಪತ್ರವನ್ನು ಪರೀಕ್ಷಾ ಕೇಂದ್ರಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಯುಪಿಎಸ್ ಸಿ ತಿಳಿಸಿದೆ.

ಈ ವರ್ಷ ಯುಪಿಎಸ್ ಸಿಯ ಮುಖ್ಯ ಪರೀಕ್ಷೆಗೆ 15 ಸಾವಿರ ಅಭ್ಯರ್ಥಿಗಳು ಅರ್ಹರಾಗಿದ್ದಾರೆ. ಪ್ರಾಥಮಿಕ ಹಂತದ ಫಲಿತಾಂಶ ಅಕ್ಟೋಬರ್ 12ರಂದು ಪ್ರಕಟಗೊಂಡಿತ್ತು. ಈ ವರ್ಷ ಯುಪಿಎಸ್ ಸಿ ಪರೀಕ್ಷೆಗೆ ದೇಶಾದ್ಯಂತ 9 ಲಕ್ಷದ 45 ಸಾವಿರದ 908 ಮಂದಿ ಪರೀಕ್ಷೆಗೆ ಅರ್ಜಿ ಸಲ್ಲಿಸಿದ್ದು, ಅವರಲ್ಲಿ 4 ಲಕ್ಷದ 63  ಸಾವಿರ ಮಂದಿ ಪರೀಕ್ಷೆ ಬರೆದಿದ್ದರು. ಪ್ರತಿವರ್ಷ ನಾಗರಿಕ ಸೇವಾ ಆಯೋಗ ಮೂರು ಹಂತಗಳಲ್ಲಿ ಪರೀಕ್ಷೆ ನಡೆಸುತ್ತದೆ. ಐಎಎಸ್, ಐಎಫ್ ಎಸ್ ಮತ್ತು ಐಪಿಎಸ್ ಹುದ್ದೆಗಳ ನೇಮಕಾತಿಗೆ 3 ಪ್ರಾಥಮಿಕ, ಮುಖ್ಯ ಮತ್ತು ಸಂದರ್ಶನ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com