ಶೇ.70ರಷ್ಟು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅರಿವೇ ಇಲ್ಲ

ಇದು ಆಶ್ಚರ್ಯ ಜೊತೆಗೆ ಅಪಾಯವೂ ಕೂಡ. ಏಕೆಂದರೆ 8ನೇ ತರಗತಿಯ ಶೇ.70 ರಷ್ಟು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ನವದೆಹಲಿ: ಇದು ಆಶ್ಚರ್ಯ ಜೊತೆಗೆ ಅಪಾಯವೂ ಕೂಡ. ಏಕೆಂದರೆ 8ನೇ ತರಗತಿಯ ಶೇ.70 ರಷ್ಟು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದ ಬಗ್ಗೆ ಅರಿವೇ ಇಲ್ಲ, ಇನ್ನು ಶೇ.55ರಷ್ಟು ವಿದ್ಯಾರ್ಥಿಗಳು ಸುಪ್ರೀಂ ಕೋರ್ಟ್ ಅನ್ನು ಭಾರತದ ಸಂಸತ್ತಿನ ಒಂದು ಭಾಗ ಎಂದು ತಿಳಿದುಕೊಂಡಿದ್ದಾರೆ, ಅಷ್ಟೇ ಅಲ್ಲದೇ ಶೇ.69ರಷ್ಟು ವಿದ್ಯಾರ್ಥಿಗಳಿಗೆ ಸ್ವಾತಂತ್ರ್ಯ ಹೋರಾಟದ ವೇಳೆ ಸ್ವದೇಶಿ ಚಳುವಳಿ ಏಕೆ ಆರಂಭವಾಯಿತು ಎಂಬುದರ ಬಗ್ಗೆ ತಿಳಿದೇ ಇಲ್ಲ. 
ಹೌದು, ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಸಮಿತಿ (ಎನ್ ಸಿಇಆರ್ ಟಿ) ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಬಹಿರಂಗಗೊಂಡಿದೆ. ಶೇ.45ರಷ್ಟು ವಿದ್ಯಾರ್ಥಿಗಳಿಗೆ ಜಲಿಯನ್ ವಾಲಾ ಬಾಗ್ ಬಗ್ಗೆ ತಿಳಿದು ಕೊಂಡಿದ್ದು, ಶೇ.50ರಷ್ಟು ವಿದ್ಯಾರ್ಥಿಗಳಿಗೆ ಭಾರತದಲ್ಲಿ ಹರಿಯುವ ಮುಖ್ಯ ನದಿಗಳ ಹೆಸರು ತಿಳಿದಿದೆ. ಅಲ್ಲದೇ ಕೇವಲ ಶೇ.50ರಷ್ಟು ವಿದ್ಯಾರ್ಥಿಗಳಿಗೆ ಜೀವ ಉಳಿಸಲು ಆಮ್ಲಜನಕ ಏಕೆ ಮುಖ್ಯ ಎಂದು ತಿಳಿದಿದೆ. 
ದತ್ತಾಂಶದ ಪ್ರಕಾರ, ದೇಶದಲ್ಲಿ 33 ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿರುವ 6,722 ಶಾಲೆಗಳು, 24,486 ಶಿಕ್ಷಕರು ಮತ್ತು 1,88,647 ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಒಳಪಡಿಸಲಾಗಿತ್ತು. 
ವಿದ್ಯಾರ್ಥಿಗಳಿಗೆ ಪ್ರಾಥಮಿಕ ಶಿಕ್ಷಣ ವ್ಯವಸ್ಥೆ ಅನುಕೂಲವಾಗಿದೆಯೇ ಇಲ್ಲವೋ ಎಂಬ ಒಳನೋಟ ತಿಳಿಯುವ ಉದ್ದೇಶದಿಂದ ಈ ಸಮೀಕ್ಷೆ ನಡೆಸಲಾಯಿತು. ಸರ್ಕಾರಿ ಮತ್ತು ಸರ್ಕಾರಿ ಅನುದಾನಿತ ಶಾಲೆಗಳು ಈ ಸಮೀಕ್ಷೆಗೆ ಒಳಪಡಿಸಲಾಗಿತ್ತು. ಈ ಸಮೀಕ್ಷೆಯ ಪ್ರಕಾರ ಶೇ.74ರಷ್ಟು ವಿದ್ಯಾರ್ಥಿಗಳಿಗೆ ಸಂವೀಧಾನದ ಪ್ರಮುಖ ಅಂಶಗಳ ಬಗ್ಗೆ ಅರಿವಿಲ್ಲ ಎಂಬುದು ತಿಳಿದು ಬಂದಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com