ಇಬ್ಬರ ಕೈ, ಕಾಲುಗಳನ್ನೇ ಕಡಿದರು!

ಆಡಳಿತಾರೂಢ ಶಿರೋಮಣಿ ಅಕಾಲಿದಳದ ನಾಯಕನೊಬ್ಬನ ತೋಟದ ಮನೆಯಲ್ಲಿ ಶನಿವಾರ ಇಬ್ಬರ ಕೈಕಾಲು...
ಪ್ರತಿಭಟನೆ ನಡೆಸುತ್ತಿರುವ ಸ್ಥಳೀಯರು...
ಪ್ರತಿಭಟನೆ ನಡೆಸುತ್ತಿರುವ ಸ್ಥಳೀಯರು...
ಅಬೋಹರ್: ಆಡಳಿತಾರೂಢ ಶಿರೋಮಣಿ ಅಕಾಲಿದಳದ ನಾಯಕನೊಬ್ಬನ ತೋಟದ ಮನೆಯಲ್ಲಿ ಶನಿವಾರ ಇಬ್ಬರ ಕೈಕಾಲುಗಳನ್ನು ಕಡಿದ ಘಟನೆ ಪಂಜಾಬ್‍ನ ಫಾಜಿಲ್ಕಾ ಜಿಲ್ಲೆಯ ಅಬೋಹರ್ ಎಂಬಲ್ಲಿ ನಡೆದಿದೆ. 
ಎರಡೂ ಕೈಗಳು ಮತ್ತು ಎರಡೂ ಕಾಲುಗಳನ್ನು ಕಳೆದುಕೊಂಡ ಭೀಮ್ ಟಾಂಕ್ ಎಂಬವರು ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಮೃತಪಟ್ಟರೆ, ಒಂದು ಕೈಯ್ಯನ್ನು ಕಳೆದುಕೊಂಡ ಗುರ್ಜಂತ್ ಸಿಂಗ್ ಸ್ಥಿತಿ ಚಿಂತಾಜನಕವಾಗಿದೆ. 
ಘಟನೆ ಸಂಬಂಧ ಅಕಾಲಿದಳ ನಾಯಕ ಶಿವಲಾಲ್ ದೋಡಾ ಸೇರಿದಂತೆ 11 ಮಂದಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ. ಈ ಘಟನೆಯಿಂದ ರೊಚ್ಚಿಗೆದ್ದ ಸ್ಥಳೀಯರು ಭಾನುವಾರ ಭಾರಿ ಪ್ರತಿಭಟನೆ ನಡೆಸಿದ್ದು, ಜಿಲ್ಲೆಯಾದ್ಯಂತ ವ್ಯಾಪಾರಿಗಳು ಅಂಗಡಿಗಳನ್ನು ಮುಚ್ಚಿ ಸ್ವಯಂಪ್ರೇರಿತ ಬಂದ್ ಆಚರಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com