ಶಿರಡಿ ಸಾಯಿ ಬಾಬಾ
ದೇಶ
ಕೇಂದ್ರದ ಚಿನ್ನ ಠೇವಣಿಗೆ ಶಿರಡಿಯ 200 ಕೆಜಿ ಚಿನ್ನ
ತಿರುಪತಿ, ಸಿದ್ದಿ ವಿನಾಯಕ ದೇವಾಲಯಗಳ ನಂತರ ಈಗ ಶಿರಡಿ ಸಾಯಿ ಬಾಬಾ ದೇವಸ್ಥಾನ ತನ್ನಲ್ಲಿರುವ ಚಿನ್ನವನ್ನು ಗೋಲ್ಡ್ ಮಾನಿಟೈಸೇಷನ್ ಸ್ಕೀಂನಲ್ಲಿ ಇಡಲು ನಿರ್ಧರಿಸಿದೆ...
ಮುಂಬೈ: ತಿರುಪತಿ, ಸಿದ್ದಿ ವಿನಾಯಕ ದೇವಾಲಯಗಳ ನಂತರ ಈಗ ಶಿರಡಿ ಸಾಯಿ ಬಾಬಾ ದೇವಸ್ಥಾನ ತನ್ನಲ್ಲಿರುವ ಚಿನ್ನವನ್ನು ಗೋಲ್ಡ್ ಮಾನಿಟೈಸೇಷನ್ ಸ್ಕೀಂನಲ್ಲಿ ಇಡಲು ನಿರ್ಧರಿಸಿದೆ. ದೇವಸ್ಥಾನ ಮಂಡಳಿ 200 ಕೆಜಿ ಚಿನ್ನ ಈ ಯೋಜನೆಯಲ್ಲಿ ಇಡಲಿದೆ ಎಂದು ಮೂಲಗಳು ತಿಳಿಸಿವೆ. ದೇವಸ್ಥಾನ ಮಂಡಳಿ ಈ ಹಿಂದೆ ಚಿನ್ನ ಕರಗಿಸಲು ನಿರ್ಧರಿಸಿತ್ತು. ಆದರೆ ಕೆಲವರು ಭಕ್ತರು ಚಿನ್ನ ನೀಡಿರುವುದು ದೇವರಿಗೆ ಕರಗಿಸಿ ಹಣ ಮಾಡುವುದಕ್ಕಲ್ಲ ಎಂದು ಕೋರ್ಟ್ ಮೆಟ್ಟಿಲೇರಿದ್ದರು. ಬಾಂಬೆ ಹೈಕೋರ್ಟ್ ಚಿನ್ನ ಕರಗಿಸುವ ದೇವಸ್ಥಾನ ಮಂಡಳಿ ನಿರ್ಧಾರಕ್ಕೆ ತಡೆ ನೀಡಿತ್ತು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ