ಮೋದಿ ಭಾಷಣ ತರ್ಜುಮೆ ಮಾಡಲು ಎಡವಿದ ಸುರೇಂದ್ರನ್

ಪ್ರಧಾನಿ ಮೋದಿಯವರು ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರೆ ಇನ್ನೊಂದು ತುದಿಯಲ್ಲಿ ಸುರೇಂದ್ರನ್ ಆ ಭಾಷಣವನ್ನು ಮಲಯಾಳಂಗೆ ತರ್ಜುಮೆ ಮಾಡುತ್ತಿದ್ದರು. ಆದರೆ ಮೋದಿಯವರು ಹೇಳಿದ...
ತ್ರಿಶ್ಶೂರಿನಲ್ಲಿ ಮೋದಿ ಭಾಷಣ ಮಾಡುತ್ತಿರುವುದು
ತ್ರಿಶ್ಶೂರಿನಲ್ಲಿ ಮೋದಿ ಭಾಷಣ ಮಾಡುತ್ತಿರುವುದು
Updated on
ತ್ರಿಶ್ಶೂರ್: ಡಿಸೆಂಬರ್ 14, ಸೋಮವಾರದಂದು ಪ್ರಧಾನಿ ನರೇಂದ್ರ ಮೋದಿ ಕೇರಳಕ್ಕೆ ಭೇಟಿ ನೀಡಿದ್ದರು. ಪ್ರಧಾನಿಯಾದ ನಂತರ ಮೋದಿ ಕೇರಳ ಭೇಟಿ ಇದೇ ಮೊದಲು. ಮೋದಿ ತ್ರಿಶ್ಶೂರಿನಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತಾಡಿದ್ದು, ಅವರು ಹಿಂದಿ ಭಾಷಣವನ್ನು ತರ್ಜುಮೆ ಮಾಡಲು ಕೇರಳ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೆ. ಸುರೇಂದ್ರನ್ ಅವರನ್ನು ನಿಯೋಜಿಸಲಾಗಿತ್ತು.
ಪ್ರಧಾನಿ ಮೋದಿಯವರು ಹಿಂದಿಯಲ್ಲಿ ಭಾಷಣ ಮಾಡುತ್ತಿದ್ದರೆ ಇನ್ನೊಂದು ತುದಿಯಲ್ಲಿ ಸುರೇಂದ್ರನ್ ಆ ಭಾಷಣವನ್ನು ಮಲಯಾಳಂಗೆ ತರ್ಜುಮೆ ಮಾಡುತ್ತಿದ್ದರು. ಆದರೆ ಮೋದಿಯವರು ಹೇಳಿದ ವಿಷಯವನ್ನು ಸರಿಯಾಗಿ ತರ್ಜುಮೆ ಮಾಡುವಲ್ಲಿ ಸುರೇಂದ್ರನ್ ಎಡವುತ್ತಿರುವುದು ಎಲ್ಲರಿಗೂ ಕಾಣಿಸುತ್ತಿತ್ತು. ಮೋದಿಯವರು ಹೇಳಿದ್ದೇ ಒಂದು, ತರ್ಜುಮೆ ಆಗುತ್ತಿರುವುದು ಇನ್ನೊಂದು! ಮೋದಿಯವರು ಹೇಳಿದ ಕೆಲವೊಂದು ಮಾತುಗಳನ್ನು ಸುರೇಂದ್ರನ್ ಹೇಳುತ್ತಲೇ ಇರಲಿಲ್ಲ.
ಇದನ್ನು ಗಮನಿಸಿದ ಮೋದಿ, ಸುರೇಂದ್ರನ್ ಅವರತ್ತ ತಿರುಗಿದಾಗ ನನಗೆ ನೀವು ಹೇಳಿಸಿದ್ದು ಕೇಳಿಸಿಲ್ಲ ಎಂಬ ಉತ್ತರ ಅತ್ತ ಕಡೆಯಿಂದ ಬಂತು. ಮೋದಿಯವರಿಗೆ ಸುರೇಂದ್ರನ್ ಅವರು ಎಡವಿದ್ದು ಗೊತ್ತಾಯ್ತು. ಆಗ ಅವರು, ಸುರೇಂದ್ರನ್‌ಗೆ  ನಾನು ಹೇಳಿದ್ದು ಕೇಳಿಸುತ್ತಿಲ್ಲ ಎಂದೆನಿಸುತ್ತಿದೆ. ಮೈಕ್ ತೆಗೆದುಕೊಂಡು ಪಕ್ಕಕ್ಕೆ ಬನ್ನಿ ಎಂದರು. ಆಮೇಲೆ ತಕ್ಷಣವೇ ಸುರೇಂದ್ರನ್ ಬದಲು ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ವಿ. ಮುರಳೀಧರನ್ ವೇದಿಕೆಗೆ ಬಂದು ಮೋದಿಯವರ ಭಾಷಣವನ್ನು ಅಚ್ಚುಕಟ್ಟಾಗಿ ಮಲಯಾಳಂಗೆ ತರ್ಜುಮೆ ಮಾಡಿ ಹೇಳಿದರು.
ಸೋಷ್ಯಲ್ ಮೀಡಿಯಾದಲ್ಲಿ ಸುರೇಂದ್ರನ್ ಗೆ ಹಿಂದಿ ಪಾಠ
ಸುರೇಂದ್ರನ್ ಹಿಂದಿ ತರ್ಜುಮೆ ಮಾಡಿದ್ದರಲ್ಲಿ ಆದ ಎಡವಟ್ಟುಗಳು ಕೂಡಲೇ ಸಾಮಾಜಿಕ ತಾಣಗಳಲ್ಲಿ ಸುದ್ದಿಯಾಯ್ತು. ಹಲವಾರು ತಮಾಷೆಯ ಪೋಸ್ಟ್ ಗಳು ಇಲ್ಲಿ ಹರಿದಾಡಿದವು. 
ಕಾಂಗ್ರೆಸ್ ಶಾಸಕ ವಿಟಿ ಬಲರಾಂ ಅವರು ಸುರೇಂದ್ರನ್ ಅವರಿಗೆ ಹಿಂದಿ ವರ್ಣಮಾಲೆಯನ್ನು ಕಳಿಸಿ ಫೇಸ್ ಬುಕ್ ಪೋಸ್ಟ್  ಹಾಕಿದರೆ, ಇನ್ನು ಹಲವಾರು ನೆಟಿಜನ್ ಗಳು ಹಿಂದಿ-ಮಲಯಾಳಂ ಟ್ರೋಲ್ ಗಳ ಮೂಲಕ ಸುರೇಂದ್ರನ್‌ರ ಹಿಂದಿ ಗ್ರಹಿಸುವಿಕೆಯನ್ನು ಲೇವಡಿ ಮಾಡಿದರು.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com