ನವದೆಹಲಿ: ಬೃಹತ್ ರಿಟೇಲ್ ಕಂಪನಿ ವಾಲ್ ಮಾರ್ಟ್ ಚೆನ್ನೈನಲ್ಲಿ ಇತ್ತೀಚೆಗೆ ಸಂಭವಿಸಿದ ಪ್ರವಾಹ ಅವಾಂತರ ಪರಿಹಾರ ನಿಧಿಗೆ ರು.1 ಕೋಟಿ ನೆರವು ನೀಡಿದೆ. ಕಂಪನಿಯ ಸಾಮಾಜಿಕ ಹೊಣೆಗಾರಿಕೆ ಅಡಿಯಲ್ಲಿ ಈ ಕೊಡುಗೆ ನೀಡಲಾಗುತ್ತಿದೆ ಎಂದು ಕಂಪನಿ ಹೇಳಿದೆ. ಪ್ರವಾಹದಿಂದ ಸಂಕಷ್ಟಕ್ಕೆ ಸಿಲುಕಿದವರಿಗೆ ಆರೋಗ್ಯ ಕಿಟ್, ಆಹಾರ ಪೊಟ್ಟಣಗಳು, ಶುದ್ಧ ಕುಡಿವ ನೀರು ಮತ್ತು ಟಾರ್ಪಾಲಿನ್‍ಗಳನ್ನು ವಿತರಿಸಲು ಈ ನೆರವು ನೀಡಲಾಗಿದೆ ಎಂದು ಕಂಪನಿ ತಿಳಿಸಿದೆ. ಕಂಪನಿಯ ಹಲವಾರು ಸಿಬ್ಬಂದಿ ಸಹ ಬಟ್ಟೆ ಸೇರಿದಂತೆ ಇತರೆ ತುರ್ತು ಉತ್ಪನ್ನಗಳನ್ನು ಎನ್‍ಜಿಒಗಳು ಮತ್ತಿತರ ಸಂಸ್ಥೆಗಳ ಮೂಲಕ ಸಂತ್ರಸ್ತರಿಗೆ ತಲುಪಿಸಿದ್ದಾರೆ ಎಂದು ಕಂಪನಿ ಪ್ರಕಟಣೆಯಲ್ಲಿ ಹೇಳಿದೆ.