2017 ಕ್ಕೆ ಚಂದ್ರಯಾನ-2 , 2019 ರಲ್ಲಿ ಸೋಲಾರ್ ಮಿಷನ್ ಗಾಗಿ ಉಪಗ್ರಹ ಉಡಾವಣೆ

ಚಂದ್ರನಲ್ಲಿ ಅನ್ವೇಷಣೆ ನಡೆಸಲು ಉದ್ದೇಶಿಸಿರುವ ಚಂದ್ರಯಾನ-2 2017 ರಲ್ಲಿ ಹಾಗೂ ದೇಶದ ಪ್ರಥಮ ಸೋಲಾರ್ ಮಿಷನ್ ಆದಿತ್ಯ ಎಲ್-1 ಯೋಜನೆ 2019 ರಲ್ಲಿ ಪ್ರಾರಂಭವಾಗಲಿದೆ.
ಚಂದ್ರಯಾನ-2  (ಸಾಂಕೇತಿಕ ಚಿತ್ರ)
ಚಂದ್ರಯಾನ-2 (ಸಾಂಕೇತಿಕ ಚಿತ್ರ)

ನವದೆಹಲಿ: ಚಂದ್ರನಲ್ಲಿ ಅನ್ವೇಷಣೆ ನಡೆಸಲು ಉದ್ದೇಶಿಸಿರುವ ಚಂದ್ರಯಾನ-2 2017 ರಲ್ಲಿ ಹಾಗೂ ದೇಶದ ಪ್ರಥಮ ಸೋಲಾರ್ ಮಿಷನ್ ಆದಿತ್ಯ ಎಲ್-1 ಯೋಜನೆ 2019 ರಲ್ಲಿ  ಪ್ರಾರಂಭವಾಗಲಿದೆ.
2017 ಕ್ಕೆ ಚಂದ್ರಯಾನ-2 ಚಂದ್ರನ ಕಕ್ಷೆಗೆ ತಲುಪಲಿದ್ದು, ಅನ್ಯಗ್ರಹ ಜೀವಸಂಕುಲದ ಬಗ್ಗೆ ಹೆಚ್ಚು ಅನ್ವೇಷಣೆ ನಡೆಸಲಿದೆ ಎಂದು ಪ್ರಧಾನಿ ಕಾರ್ಯಾಲಯದ ಸಚಿವ ಜಿತೇಂದ್ರ ಸಿಂಗ್ ಲೋಕಸಭೆಗೆ ತಿಳಿಸಿದ್ದಾರೆ.
ಸೂರ್ಯ-ಭೂಮಿಯ ಲ್ಯಾಗ್ರಾಂಜಿಯನ್ ಪಾಯಿಂಟ್(ಎಲ್-1 ) ಕಕ್ಷೆಯಲ್ಲಿ ಸೂರ್ಯನ ಕುರಿತು ಅಧ್ಯಯನ ನಡೆಸುವುದಕ್ಕಾಗಿ ಆದಿತ್ಯ ಎಲ್-1  ಯೋಜನೆ 2019 ರಲ್ಲಿ ಪ್ರಾರಂಭವಾಗಲಿದೆ. ಸೂರ್ಯ ಹೊರಗಿನ ಪದರಗಳ (ಕರೋನದ) ಅಧ್ಯಯನಕ್ಕಾಗಿ ಆದಿತ್ಯ-1 ಕೊರೊನಾಗ್ರಾಫ್ ಸೇರಿದಂತೆ ಏಳು ಉಪಗ್ರಹ ಉಪಕರಣಗಳನ್ನು ಹೊತ್ತೊಯ್ಯಲಿದೆ ಎಂದು ಜಿತೇಂದ್ರ ಸಿಂಗ್ ತಿಳಿಸಿದ್ದಾರೆ.
ಸೋಲಾರ್ ಮಿಷನ್ ಗಾಗಿ ಸುಮಾರು 378 .53 ಕೋಟಿ ರುಪಾಯಿ ವೆಚ್ಚವಾಗಲಿದ್ದು ಸ್ಪೇಸ್ ಮಾರ್ಕೆಟಿಂಗ್ ನ ಅಡಿಯಲ್ಲಿ ಸಿಂಗಪುರದ 6 ಉಪಗ್ರಹದ ಉಡಾವಣೆಯಿಂದಾಗಿ ಭಾರತಕ್ಕೆ 26 ಮಿಲಿಯನ್ ಯುರೋಗಳಷ್ಟು ಲಾಭ ಬರಲಿದೆ ಎಂದು ಸಚಿವರು ತಿಳಿಸಿದ್ದಾರೆ.  ವಿದೇಶಗಳ ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಭಾರತ ಈ ವರೆಗೂ 15 ಮಿಲಿಯನ್ ಡಾಲರ್ ಹಾಗೂ 80 ಮಿಲಿಯನ್ ಯುರೋಗಳನ್ನು ಗಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com