ದೆಹಲಿಯ ವಾಣಿಜ್ಯ ವಾಹನಗಳಿಗೆ ವಿಧಿಸುವ ಶುಲ್ಕ ಏರಿಸಿದ ಸುಪ್ರೀಂ ಕೋರ್ಟ್

ದೆಹಲಿ ಪ್ರವೇಶಿಸುವ ವಾಣಿಜ್ಯ ವಾಹನಗಳಿಗೆ ವಿಧಿಸಲಾಗುವ ಪರಿಸರ ಪರಿಹಾರ ಶುಲ್ಕ(ಇಸಿಸಿ)ವನ್ನು ಸುಪ್ರೀಂ ಕೋರ್ಟ್ ಶೇ.100 ರಷ್ಟು ಏರಿಕೆ ಮಾಡಿದೆ.

ನವದೆಹಲಿ: ದೆಹಲಿ ಪ್ರವೇಶಿಸುವ ವಾಣಿಜ್ಯ ವಾಹನಗಳಿಗೆ ವಿಧಿಸಲಾಗುವ ಪರಿಸರ ಪರಿಹಾರ ಶುಲ್ಕ(ಇಸಿಸಿ)ವನ್ನು ಸುಪ್ರೀಂ ಕೋರ್ಟ್ ಶೇ.100 ರಷ್ಟು ಏರಿಕೆ ಮಾಡಿದ್ದು, 2 ,000 ಸಿಸಿ ಸಾಮರ್ಥ್ಯದ ಇಂಜಿನ್ ಹೊಂದಿರುವ ಡೀಸೆಲ್ ವಾಹನಗಳ ನೋಂದಣಿಯನ್ನು ಸಂಪೂರ್ಣವಾಗಿ ನಿಷೇಧಿಸಿದೆ.
2005 ಕ್ಕೂ ಮುನ್ನ ನೋಂದಣಿಯಾದ ಯಾವುದೇ ವಾಣಿಜ್ಯ ವಾಹನಗಳು ದೆಹಲಿ ಪ್ರವೇಶಿಸುವಂತಿಲ್ಲ ಹಾಗೂ ಟ್ಯಾಕ್ಸಿಗಳು 2016 ರ ಮಾರ್ಚ್ ವೇಳೆಗೆ ಸಿಎನ್ ಜಿ ಅನಿಲಕ್ಕೆ ಬದಲಾವಣೆಯಾಗಬೇಕು ಎಂದು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶ ಟಿ.ಎಸ್ ಠಾಕೂರ್ ಅವರಿದ್ದ ಪೀಠ ಹೇಳಿದೆ.
ವಾಣಿಜ್ಯ ವಾಹನಗಳಿಗೆ ವಿಧಿಸಲಾಗುವ ಶುಲ್ಕ(ಇಸಿಸಿ) ಏರಿಕೆಯಾಗಿರುವುದರಿಂದ, ದೆಹಲಿ ಪ್ರವೇಶಿಸುವ ಮುನ್ನ ಲಘು ವಾಣಿಜ್ಯ ವಾಹನಗಳು ಪ್ರತಿಬಾರಿ 1 ,400 ಹಾಗೂ 3 ,4 ಅಕ್ಸೇಲ್ ಗಳ ವಾಣಿಜ್ಯ ವಾಹನಗಳು 2 ,600 ರೂಪಾಯಿ ಪಾವತಿಸಬೇಕಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com