ಪ್ರಧಾನಿ ಮೋದಿ ಜೊತೆ ಇರುವ ಈ ವ್ಯಕ್ತಿ ಯಾರು?

ನೋಡಲು ತುಂಬಾ ದುರ್ಬಲವಾಗಿ ಕಾಣಿಸುತ್ತಿರುವ ವ್ಯಕ್ತಿಯೊಬ್ಬರ ಜೊತೆ ಪ್ರಧಾನಿ ನರೇಂದ್ರ ಮೋದಿ ಕುಶಲೋಪರಿ ನಡೆಸುತ್ತಿರುವ ಈ...
ಸಂಭಾಜಿ ಭಿಡೆ- ನರೇಂದ್ರ ಮೋದಿ
ಸಂಭಾಜಿ ಭಿಡೆ- ನರೇಂದ್ರ ಮೋದಿ

ನವದೆಹಲಿ: ನೋಡಲು ತುಂಬಾ ದುರ್ಬಲವಾಗಿ ಕಾಣಿಸುತ್ತಿರುವ ವ್ಯಕ್ತಿಯೊಬ್ಬರ ಜೊತೆ ಪ್ರಧಾನಿ ನರೇಂದ್ರ ಮೋದಿ ಕುಶಲೋಪರಿ ನಡೆಸುತ್ತಿರುವ ಈ ಚಿತ್ರ ಸಾಮಾಜಿಕ ತಾಣದಲ್ಲಿ ಭಾರಿ ಸುದ್ದಿ ಮಾಡುತ್ತಿದೆ. ಈ ವ್ಯಕ್ತಿ ಯಾರು? ಅವರ ಕಾರ್ಯವೇನು? ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಿದ್ಯಾಕೆ ಎಂಬ ಕುತೂಹಲವಿದ್ದರೆ ಮುಂದೆ ಓದಿ....

ಈ ವ್ಯಕ್ತಿ ಚಿತ್ರದಲ್ಲಿ ನೋಡಲು ತುಂಬಾ ಸರಳ ಮತ್ತು ದುರ್ಬಲರಂತೆ ಕಾಣಿಸುತ್ತಿರಬಹುದು. ಆದರೆ ಹಿಂದೊಮ್ಮೆ ಸ್ವತಃ ಮೋದಿಯೇ ತನಗೆ ಈ ವ್ಯಕ್ತಿ ಸ್ಫೂರ್ತಿ ಅಂತ ಬಹಿರಂಗವಾಗಿಯೇ ಹೇಳಿಕೊಂಡಿದ್ದರು.

ಇವರು ಬೇರಾರು ಅಲ್ಲ ಮಹಾರಾಷ್ಟ್ರದ ಸತಾರಾ, ಸಾಂಗ್ಲಿಯ ಶಿವ ಪ್ರತಿಷ್ಠಾನದ ಪ್ರಮುಖ ವ್ಯಕ್ತಿಯೇ ಸಂಭಾಜಿ ಭಿಡೆ ಗುರೂಜಿ. ಅವರ ಅನುಯಾಯಿಗಳಿಗೆ ಗುರೂಜಿ (85ವರ್ಷ) ಯಾಗಿರುವ ಸಂಭಾಜಿ ಅವರು ಛತ್ರಪತಿ ಶಿವಾಜಿಯ ಪರಮ ಅನುಯಾಯಿಯಾಗಿದ್ದಾರೆ.

ಮೋದಿ ಅವರು ಕಳೆದ ಲೋಕಸಭಾ ಚುನಾವಣೆ ವೇಳೆ ಮಹಾರಾಷ್ಟ್ರದಲ್ಲಿ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ, ಭಿಡೆ ಗುರೂಜಿ ನನ್ನ ಆಹ್ವಾನಿಸಿಲ್ಲ, ಆದರೆ ನಾನು ಅವರ ಆಜ್ಞಾನುಸಾರ ಇಲ್ಲಿಗೆ ಬಂದಿದ್ದೇನೆ ಎಂದು ಹೇಳುವ ಮೂಲಕ ತಮ್ಮ ಅಭಿಮಾನವನ್ನು ವ್ಯಕ್ತಪಡಿಸಿದ್ದರು.

ಸಂಭಾಜಿ ಭಿಡೆ ಪುಣೆ ಯೂನಿರ್ವಸಿಟಿಯಲ್ಲಿ ಎಂಎಸ್ಸಿ ಭೌತಶಾಸ್ತ್ರದಲ್ಲಿ ಚಿನ್ನದ ಪದಕ ಪಡೆದಿದ್ದು, ಆರಂಭದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅವರು, ನಂತರ ಕೆಲಸ ತೊರೆದು ಆರ್ ಎಸ್ ಎಸ್ ನಲ್ಲಿ ತಮ್ಮನ್ನು ತಾವು ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. 1980ರಲ್ಲಿ ತಮ್ಮದೇ ಆದ ಶಿವ ಪ್ರತಿಷ್ಠಾನವನ್ನು ಆರಂಭಿಸಿದ್ದರು.

ಸರಳ ಜೀವಿಯಾಗಿರುವ ಗುರೂಜಿಯವರು ಚಪ್ಪಲಿ ಧರಿಸುವುದಿಲ್ಲ, ಅವರಿಗೆ ಸ್ವಂತದ ಮನೆಯೂ ಇಲ್ಲ. ಅಷ್ಟೇ ಅಲ್ಲ ಯಾವುದೇ ರಾಜಕೀಯ ಪಕ್ಷದ ಜೊತೆಗೂ ಗುರುತಿಸಿಕೊಂಡಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com