ಏರಿಂಡಿಯಾ ದುರಂತಕ್ಕೇನು ಕಾರಣ?

ಮುಂಬೈನಲ್ಲಿ ಬುಧವಾರ ರಾತ್ರಿ ಏರಿಂಡಿಯಾ ವಿಮಾನದ ಎಂಜಿನ್‍ಗೆ ಸಿಲುಕಿ ಎಂಜಿನಿಯರ್ ರವಿ ಸುಬ್ರಮಣಿಯನ್...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ನವದೆಹಲಿ: ಮುಂಬೈನಲ್ಲಿ ಬುಧವಾರ ರಾತ್ರಿ ಏರಿಂಡಿಯಾ ವಿಮಾನದ ಎಂಜಿನ್‍ಗೆ ಸಿಲುಕಿ ಎಂಜಿನಿಯರ್ ರವಿ ಸುಬ್ರಮಣಿಯನ್ ಮೃತಪಟ್ಟ ಘಟನೆಗೆ ನಿಯಮ ಪಾಲನೆ ದೋಷ ಕಾರಣವೆಂಬ ಅಂಶ ಬೆಳಕಿಗೆ ಬಂದಿದೆ. 
ಖಾಸಗಿ ಸಂಸ್ಥೆ ಇಂಡಿಗೋದ ನಿರ್ವಹಣಾ ವ್ಯವಸ್ಥಾಪಕ ಪ್ರದೀಪ್ ಸಿಂಗ್ ತಮ್ಮ ಕಂಪನಿಗೆ ಕಳುಹಿಸಿದ ಇಮೇಲ್‍ನಲ್ಲಿ ಈ ಅಂಶ ಉಲ್ಲೇಖಿಸಿದ್ದಾರೆ. ವಿಮಾನ ಅಚಾನಕ್ಕಾಗಿ ಮುಂದೆ ಚಲಿಸದಂತೆ ಚಕ್ರಗಳಿಗೆ ಹಾಕುವ ಛೋಕ್‍ಗಳನ್ನು ಹಾಕಿರಲಿಲ್ಲ. 
ಗ್ರೌಂಡ್ ಎಂಜಿನಿಯರ್‍ನಿಂದ ಹೊರಡಲು ಸಂದೇಶ ಪಡೆಯುವ ಮುನ್ನವೇ ವಿಮಾನ ಚಲಿಸಿದ್ದು ಹಾಗೂ ಪೈಲಟ್ ಮತ್ತು ನೆಲಮಟ್ಟದ ಸಿಬ್ಬಂದಿಯ ನಡುವಿನ ಸಂವಹನ ಕೊರತೆಯಿಂದ ಈ ದುರ್ಘಟನೆ ಸಂಭವಿಸಿದೆ ಎಂದು ರಾವತ್ ಹೇಳಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com