ಸುಬ್ರಮಣಿಯನ್ ಸ್ವಾಮಿ
ದೇಶ
ಸುಬ್ರಮಣಿಯನ್ ಸ್ವಾಮಿಗೆ ಕೇಂದ್ರದಿಂದ ನಿವಾಸ ಹಂಚಿಕೆ
ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಗೆ ಕೇಂದ್ರ ಸರ್ಕಾರ ಮನೆಯೊಂದನ್ನು ನೀಡಲು...
ನವದೆಹಲಿ: ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಅವರಿಗೆ ಕೇಂದ್ರ ಸರ್ಕಾರ ಮನೆಯೊಂದನ್ನು ನೀಡಲು ನಿರ್ಧರಿಸಿದೆ.
ನ್ಯಾಷನಲ್ ಹೆರಾಲ್ಡï ಪ್ರಕರಣದಲ್ಲಿ ಸೋನಿಯಾ, ರಾಹುಲ್ ವಿರುದ್ಧದ ಫಿರ್ಯಾದುದಾರರಾಗಿರುವ ಸ್ವಾಮಿ ಅವರಿಗೆ ಭದ್ರತೆ ಕಾರಣದಿಂದ ಮನೆ ನೀಡಲು ನಿರ್ಧರಿಸಿದ್ದಾರೆಂದು ಮೂಲಗಳು ತಿಳಿಸಿವೆ.
ರಾಜನಾಥ್ ಸಿಂಗ್ ನೇತೃತ್ವದ ವಸತಿ ಸಂಪುಟ ಸಮಿತಿ ಗುರುವಾರ ಹಂಚಿಕೆ ಪೂರೈಸಿರುವುದಾಗಿ ತಿಳಿದುಬಂದಿದೆ.
ಸ್ವಾಮಿ ಅವರಿಗೆ ಈಗ ಝಡ್ ಕೆಟಗರಿ ಭದ್ರತೆಯಿದೆ. ಆದರೆ ಸಿಬ್ಬಂದಿಗೆ ಮನೆಯಲ್ಲಿ ತಂಗಲು ಜಾಗವಿಲ್ಲದಿರುವುದರಿಂದ ಹೊಸ ಮನೆ ಒದಗಿಸಲಾಗಿದೆ ಎಂದು ಎನ್‍ಡಿಟಿವಿ ವರದಿ ಮಾಡಿದೆ.


