ನವದೆಹಲಿ: ಅಲ್ ಖೈದಾ ಉಗ್ರ ಸಂಘಟನೆಯೊಂದಿಗೆ ಸಂಪರ್ಕ ಹೊಂದಿದ್ದ ಆರೋಪದಲ್ಲಿ ಬಂಧಿಸಲಾಗಿರುವ ಒಡಿಶಾ ಮೂಲದ ಮದರಸಾ ಶಿಕ್ಷಕನ ವಿರುದ್ಧ ಪಾಕಿಸ್ತಾನದ ತೀವ್ರವಾದಿಗಳಿಗೆ ಆಶ್ರಯ ನೀಡಿದ್ದ ಆರೋಪ ಕೇಳಿಬಂದಿದೆ.
2007 ರಲ್ಲಿ ನಡೆದಿದ್ದ ಗ್ಲ್ಯಾಸ್ಗೋ ಅಂತರ ರಾಷ್ಟ್ರೀಯ ವಿಮಾನ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯೊಂದಿಗೆ ಬಂಧಿತ ಆರೋಪಿ ಅಬ್ದುಲ್ ರೆಹಮಾನ್ (37 ) ಸಂಪರ್ಕ ಹೊಂದಿರುವುದು ತನಿಖಾಧಿಕಾರಿಗಳಿಗೆ ವಿಚಾರಣೆ ವೇಳೆ ತಿಳಿದುಬಂದಿದೆ. ಉತ್ತರ ಪ್ರದೇಶದಲ್ಲಿ ವಾಸವಿದ್ದ ಅಬ್ದುಲ್ ರೆಹಮಾನ್ ಗೆ ಇಬ್ಬರು ಪಾಕಿಸ್ತಾನದ ವ್ಯಕ್ತಿಗಳು ಪರಿಚಯವಾಗಿದ್ದರು. ಈ ಇಬ್ಬರಿಗೆ ಅಬ್ದುಲ್ ರೆಹಮಾನ್ ಆಶ್ರಯ ನೀಡಿದ್ದ, ಅಬ್ದುಲ್ ರೆಹಮಾನ್ ಆಶ್ರಯ ನೀಡಿದ್ದ ಇಬ್ಬರೂ ಪಾಕಿಸ್ತಾನಿಯರನ್ನು ಲಖನೌ ದಲ್ಲಿ ಎನ್ ಕೌಂಟರ್ ಮೂಲಕ ಹತ್ಯೆ ಮಾಡಲಾಗಿತ್ತು. ಈ ಪ್ರಕರಣ ನಡೆದ ನಂತರ ಅಬ್ದುಲ್ ರೆಹಮಾನ್ ತಲೆಮರೆಸಿಕೊಂಡಿದ್ದರು.
ಒಡಿಶಾದ ಕಟಕ್ ದಲ್ಲಿ ಮದರಸಾ ನಡೆಸುತ್ತಿದ್ದ ಅಬ್ದುಲ್ ರೆಹಮಾನ್ ನನ್ನು ದೆಹಲಿ ಪೊಲೀಸರು ಡಿ.16 ರಂದು ಬಂಧಿಸಿದ್ದರು.
Advertisement