ರಾಜ್ಯಸಭಾ ಕಲಾಪ (ಸಂಗ್ರಹ ಚಿತ್ರ)
ದೇಶ
ರಾಮಮಂದಿರ ನಿರ್ಮಾಣ ವಿಷಯದಲ್ಲಿ ಗದ್ದಲ: ರಾಜ್ಯಸಭಾ ಕಲಾಪ ಮುಂದೂಡಿಕೆ
ರಾಮಮಂದಿರ ನಿರ್ಮಾಣ ವಿಷಯ ರಾಜ್ಯಸಭಾ ಕಲಾಪ ಮುಂದೂಡಿಕೆಗೆ ಕಾರಣವಾಗಿದೆ.
ನವದೆಹಲಿ: ರಾಮಮಂದಿರ ನಿರ್ಮಾಣ ವಿಷಯ ರಾಜ್ಯಸಭಾ ಕಲಾಪ ಮುಂದೂಡಿಕೆಗೆ ಕಾರಣವಾಗಿದೆ.
ಗುಜರಾತ್ ಹಾಗೂ ರಾಜಸ್ಥಾನದಿಂದ ರಾಮಮಂದಿರ ನಿರ್ಮಾಣಕ್ಕಾಗಿ ಕಲ್ಲುಗಳನ್ನು ಸಂಗ್ರಹಿಸಲಾಗುತ್ತಿರುವ ವಿಷಯವನ್ನು ಜೆಡಿಯು ನಾಯಕ ಕೆಸಿ ತ್ಯಾಗಿ ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡಿ, ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದ್ದು ಇದನ್ನೂ ಮುನ್ನ ಕೋಮು ದೃವೀಕರಣಕ್ಕೆ ಬಿಜೆಪಿ ಯತ್ನಿಸುತ್ತಿದೆ ಎಂದು ಆರೋಪಿಸಿದ್ದಾರೆ.
ರಾಮಮಂದಿರ ನಿರ್ಮಾಣಕ್ಕೆ ಮೋದಿ ಸರ್ಕಾರದಿಂದ ಸಿಗ್ನಲ್ ದೂರೆತಿದೆ ಎಂದು ಮಹಾಂತ್ ನ್ರಿತ್ಯ ಗೋಪಾಲ್ ದಾಸ್ ನೀಡಿದ್ದ ಹೇಳಿಕೆಯನ್ನು ಕೆಸಿ ತ್ಯಾಗಿ ಉಲ್ಲೇಖಿಸಿದ್ದಾರೆ. ಕೆಸಿ ತ್ಯಾಗಿ ಆರೋಪಕ್ಕೆ ಪ್ರತಿಕ್ರಿಯೆ ನೀಡಿರುವ ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ, ರಾಮಮಂದಿರ ನಿರ್ಮಾಣಕ್ಕೆ ಕಲ್ಲು ಸಂಗ್ರಹಿಸುವ ಕಾರ್ಯ 1990 ರಿಂದ ನಡೆಯುತ್ತಿದ್ದು, ಇದು ವಿವಾದಿತ ಪ್ರದೇಶದಿಂದ 1 .5 ಕಿ.ಮಿ ದೂರದಲ್ಲಿ ನಡೆಯುತ್ತಿದೆ ಎಂದು ಸ್ಪಷ್ಟಪಡಿಸಿದ್ದಾರೆ.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ