ಅಡ್ವಾಣಿ ಅವರನ್ನು ಅನುಸರಿಸಿ ಅರುಣ್ ಜೇಟ್ಲಿ ರಾಜೀನಾಮೆ ನೀಡಲಿ: ಕಾಂಗ್ರೆಸ್

ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ನಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಅರುಣ್ ಜೇಟ್ಲಿ ರಾಜೀನಾಮೆಗೆ ಕಾಂಗ್ರೆಸ್ ನಿಂದ ಒತ್ತಡ ಹೆಚ್ಚಾಗುತ್ತಿದೆ.
ಕಾಂಗ್ರೆಸ್ ನಾಯಕ ಮನೀಶ್ ತಿವಾರಿ
ಕಾಂಗ್ರೆಸ್ ನಾಯಕ ಮನೀಶ್ ತಿವಾರಿ

ನವದೆಹಲಿ: ದೆಹಲಿ ಹಾಗೂ ಜಿಲ್ಲಾ ಕ್ರಿಕೆಟ್ ಕ್ರಿಕೆಟ್ ಸಂಸ್ಥೆ (ಡಿಡಿಸಿಎ) ನಲ್ಲಿ ನಡೆದ ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಆರೋಪ ಎದುರಿಸುತ್ತಿರುವ ಅರುಣ್ ಜೇಟ್ಲಿ ರಾಜೀನಾಮೆಗೆ ಕಾಂಗ್ರೆಸ್ ನಿಂದ ಒತ್ತಡ ಹೆಚ್ಚಾಗುತ್ತಿದೆ.
ಅರುಣ್ ಜೇಟ್ಲಿಗೆ ಅಡ್ವಾಣಿ ಉದಾಹರಣೆಯನ್ನು ನೀಡಿರುವ ಕಾಂಗ್ರೆಸ್ ನಾಯಕ ಮನೀಶ್ ತಿವಾರಿ, ಅರುಣ್ ಜೇಟ್ಲಿ ತಮ್ಮ ಹಿಂದಿನ ಕಕ್ಷೀದಾರರಾಗಿದ್ದ ಬಿಜೆಪಿ ನಾಯಕ ಎಲ್.ಕೆ ಅಡ್ವಾಣಿ ಮಾರ್ಗವನ್ನು ಅನುಸರಿಸಬೇಕು ಎಂದು ಸಲಹೆ ನೀಡಿದ್ದಾರೆ. ಅಡ್ವಾಣಿ ವಿರುದ್ಧ ಹವಾಲಾ ಹಗರಣದ ಆರೋಪ ಕೇಳಿಬಂದಾಗ ರಾಜೀನಾಮೆ ನೀಡಿದ್ದರು, ಆರೋಪದಿಂದ ಮುಕ್ತರಾದ ಎಲೆ ಮತ್ತೆ ಅಧಿಕಾರ ಸ್ವೀಕರಿಸಿದರು, ಆಗ ಅಡ್ವಾಣಿ ಪರ ಹಾಲಿ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೇ ವಾದ ಮಂಡಿಸಿದ್ದರು, ಅಡ್ವಾಣಿ ಅವರ ಮಾರ್ಗವನ್ನು ಅರುಣ್ ಜೇಟ್ಲಿ ಅವರೂ ಅನುಸರಿಸಬೇಕಿದ್ದು, ಕೂಡಲೇ ರಾಜೀನಾಮೆ ನೀಡಬೇಕು ಎಂದು ಮನೀಶ್ ತಿವಾರಿ ಆಗ್ರಹಿಸಿದ್ದಾರೆ.
ಬೇರೆ ಮುಖಂಡರ ವಿರುದ್ಧ ಆರೋಪ ಕೇಳಿಬಂದ ಕೂಡಲೇ ರಾಜೀನಾಮೆಗೆ ಆಗ್ರಹಿಸುತ್ತಿದ್ದವರಲ್ಲಿ ಅರುಣ್ ಜೇಟ್ಲಿ ಮೊದಲಿಗರಾಗಿರುತ್ತಿದ್ದರು. ಡಿಡಿಸಿಎ ಭ್ರಷ್ಟಾಚಾರದ ಬಗ್ಗೆ ನಿಷ್ಪಕ್ಷಪಾತ ತನಿಖೆ ನಡೆಯಬೇಕಾದರೆ ಅರುಣ್ ಜೇಟ್ಲಿ ರಾಜೀನಾಮೆ ನೀಡುವುವುದು ಸೂಕ್ತ ಎಂದು ತಿವಾರಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com