ಹೈಕೋರ್ಟ್ ನಲ್ಲಿ ಗುಂಡಿನ ದಾಳಿ: ಮೃತ ಪೇದೆ ಕುಟುಂಬಕ್ಕೆ ದೆಹಲಿ ಸರ್ಕಾರದಿಂದ 1 ಕೋಟಿ ಪರಿಹಾರ

ದೆಹಲಿ ಹೈಕೋರ್ಟ್ ನಲ್ಲಿ ಬುಧವಾರ ನ್ಯಾಯಾಧೀಶರೆದುರೆ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಪೇದೆಯ ಕುಟುಂಬಕ್ಕೆ ದೆಹಲಿ ಸರ್ಕಾರ...
ದುಷ್ಕರ್ಮಿಗಳು ಬಳಸಿದ ಗನ್
ದುಷ್ಕರ್ಮಿಗಳು ಬಳಸಿದ ಗನ್
ನವದೆಹಲಿ: ದೆಹಲಿ ಹೈಕೋರ್ಟ್ ನಲ್ಲಿ ಬುಧವಾರ ನ್ಯಾಯಾಧೀಶರೆದುರೆ ದುಷ್ಕರ್ಮಿಗಳು ನಡೆಸಿದ ಗುಂಡಿನ ದಾಳಿಯಲ್ಲಿ ಮೃತಪಟ್ಟ ಪೊಲೀಸ್ ಪೇದೆಯ ಕುಟುಂಬಕ್ಕೆ ದೆಹಲಿ ಸರ್ಕಾರ ಒಂದು ಕೋಟಿ ರುಪಾಯಿ ಪರಿಹಾರ ಘೋಷಿಸಿದೆ.
ದೆಹಲಿ ಕರ್ಕರಡೂಮಾ ಹೈಕೋರ್ಟ್ ನ ಹಾಲ್ ನಂ. 73ರಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ನ್ಯಾಯಾಧೀಶರೆದುರೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಮುಖ್ಯ ಪೇದೆ ರಾಮ್ ಕುಮಾರ್ ಅವರು ಮೃತಪಟ್ಟಿದ್ದರು. 
ಮುಖ್ಯ ಪೇದೆ ರಾಮ್ ಕುಮಾರ್ ಅವರ ಕುಟುಂಬಕ್ಕೆ ದೆಹಲಿ ಸರ್ಕಾರ ಒಂದು ಕೋಟಿ ರುಪಾಯಿ ಪರಿಹಾರ ನೀಡಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೋರ್ಟ್ ಹಾಲ್ ನಲ್ಲಿ ದುಷ್ಕರ್ಮಿಗಳು ಗ್ಯಾಂಗ್ ಸ್ಟರ್ ಇರ್ಫಾನ್ ನನ್ನು ಗುರಿಯಾಗಿಸಿಕೊಂಡು 10 ಸುತ್ತು ಗುಂಡು ಹಾರಿಸಿದ್ದರು. ಈ ಸಂಬಂಧ ನಾಲ್ವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com