ಪ್ರಧಾನಿ ಹೆಸರು ಬಳಸಬೇಡಿ: ಕಾಂಗ್ರೆಸ್ ಸಂಸದರಿಗೆ ಸೋನಿಯಾ ಸೂಚನೆ

ಚಳಿಗಾಲದ ಅಧಿವೇಶನ ಆರಂಭವಾದಗಿನಿಂದಲೂ ಎನ್ ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್...
ನರೇಂದ್ರ ಮೋದಿ - ಸೋನಿಯಾ ಗಾಂಧಿ
ನರೇಂದ್ರ ಮೋದಿ - ಸೋನಿಯಾ ಗಾಂಧಿ
ನವದೆಹಲಿ: ಚಳಿಗಾಲದ ಅಧಿವೇಶನ ಆರಂಭವಾದಗಿನಿಂದಲೂ ಎನ್ ಡಿಎ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಬುಧವಾರ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆ ಕೂಗದಂತೆ ಕಾಂಗ್ರೆಸ್ ಸಂಸದರಿಗೆ ಸೂಚಿಸುವ ಮೂಲಕ ಅಚ್ಚರಿ ಮೂಡಿಸಿದರು.
ಅಧಿವೇಶನದ ಕೊನೆಯ ದಿನವಾದ ಇಂದು ಕಾಂಗ್ರೆಸ್‌ ಸಂಸದ ಆಧೀರ್‌ ರಂಜನ್‌ ಚೌಧರಿ ಅವರು ಸದನದ ಬಾವಿಗಿಳಿದು ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗುತ್ತಿದ್ದರು. ಈ ವೇಳೆ ಪ್ರತಿಪಕ್ಷಗಳ ಸಾಲಿನ ಮುಂಭಾಗದಲ್ಲಿ ಕುಳಿತಿದ್ದ ಸೋನಿಯಾ ಗಾಂಧಿ, ಮೋದಿ ಸಂಸತ್ತಿನಲ್ಲಿರುವಾಗ ಅವರ ಹೆಸರು ಹಿಡಿದು ಘೋಷಣೆ ಕೂಗಬಾರದು. ಕೇವಲ ವಿಷಯ ಸಂಬಂಧಿತವಾಗಿ ಪ್ರತಿಭಟನೆ ನಡೆಸಬೇಕು ಎಂದು ಚೌಧರಿ ಮತ್ತು ಇತರರಿಗೆ ಸೂಚಿಸಿದರು.
ಸೋನಿಯಾ ಅವರ ಈ ಮಾತನ್ನು ಶಿರಸಾ ಪಾಲಿಸಿದ ಚೌಧರಿ ಮತ್ತಿತರರು ಮೋದಿ ಹೆಸರಿಡಿದು ಘೋಷಣೆ ಕೂಗುವುದನ್ನು ನಿಲ್ಲಿಸಿದರು.
ಕಲಾಪ ಮುಗಿದ ನಂತರ ನರೇಂದ್ರ ಮೋದಿ ಅವರು ಎರಡು ದಿನಗಳ ತಮ್ಮ ರಷ್ಯಾ ಪ್ರವಾಸಕ್ಕೆ ತೆರಳಿದರು.
ಸಂಸತ್ತಿನ ಈ ಚಳಿಗಾಲದ ಅಧಿವೇಶನದ ಉದ್ದಕ್ಕೂ ಒಂದಲ್ಲ ಒಂದು ವಿಷಯವನ್ನೆತ್ತಿ ಸೋನಿಯಾ ಮತ್ತು ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಪಕ್ಷ ಎನ್‌ಡಿಎ ಸರಕಾರದ ವಿರುದ್ಧ ದಾಳಿ ನಡೆಸುತ್ತಲೇ ಬಂದಿದೆ.
ವಿರೋಧ ಪಕ್ಷಗಳೊಂದಿಗಿನ ಕಗ್ಗಂಟನ್ನು ಮುರಿಯುವ ಪ್ರಯತ್ನದ ಅಂಗವಾಗಿ ಪ್ರಧಾನಿ ಮೋದಿ ಅವರು ಸೋನಿಯಾ ಗಾಂಧಿ ಅವರ ಮನವೊಲಿಕೆಗಾಗಿ ಆಕೆಯನ್ನು ಮತ್ತು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಅವರನ್ನು ಅವರ ರೇಸ್‌ಕೋರ್ಸ್‌ ರಸ್ತೆಯ ನಿವಾಸದಲ್ಲಿ ಖುದ್ದು ಭೇಟಿಯಾಗಿ ಸೌಹಾರ್ದ ಮಾತುಕತೆ ಸಹ ನಡೆಸಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com