ಎಚ್‍ಎಎಲ್‍ಗೆ ಬ್ರ್ಯಾಂಡ್ ಇಂಡಿಯಾ ವಿಮಾನ ಕಲ್ಪನೆ

ಭಾರತದ ವಾಯುಯಾನ ಕ್ಷೇತ್ರದಲ್ಲಿ ಅಗ್ರೇಸರನಂತೆ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್...
ಬೆಂಗಳೂರಿನಲ್ಲಿ ಬುಧವಾರ ನಡೆದ ಎಚ್ ಎಎಲ್ ನ 7ನೇ ವರ್ಷಾಚರಣೆ ಅಂಗವಾಗಿ ನಡೆದ ವಿಮಾನ ಪ್ರದರ್ಶನ ವೀಕ್ಷಿಸುತ್ತಿರುವ ಎಚ್ ಎಎಲ್ ಸಿಬ್ಬಂದಿಗಳು.
ಬೆಂಗಳೂರಿನಲ್ಲಿ ಬುಧವಾರ ನಡೆದ ಎಚ್ ಎಎಲ್ ನ 7ನೇ ವರ್ಷಾಚರಣೆ ಅಂಗವಾಗಿ ನಡೆದ ವಿಮಾನ ಪ್ರದರ್ಶನ ವೀಕ್ಷಿಸುತ್ತಿರುವ ಎಚ್ ಎಎಲ್ ಸಿಬ್ಬಂದಿಗಳು.
ಬೆಂಗಳೂರು: ಭಾರತದ ವಾಯುಯಾನ ಕ್ಷೇತ್ರದಲ್ಲಿ ಅಗ್ರೇಸರನಂತೆ ಕಾರ್ಯ ನಿರ್ವಹಿಸುತ್ತಿರುವ ಬೆಂಗಳೂರಿನ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 75 ವರ್ಷಾಚರಣೆ ಸಂಭ್ರಮದಲ್ಲಿದ್ದು, ಇದೀಗ ತನ್ನ ಮುಂದಿನ 25 ವರ್ಷಗಳ ದೂರದರ್ಶಿತ್ವ ಕಲ್ಪನೆಯನ್ನು ಹರಿಯಬಿಟ್ಟಿದೆ. ಪ್ರಮುಖವಾಗಿ ಬ್ರ್ಯಾಂಡ್ ಇಂಡಿಯಾ ವಿಮಾನವ ನ್ನು ಸಿದ್ಧಪಡಿಸುವ ಛಲಹೊತ್ತ ಸಂಕಲ್ಪ ಮಾಡಿದೆ. 
ಎಚ್‍ಎಎಲ್ನ 75ನೇ ವರ್ಷದ ಸಂಸ್ಥಾಪನಾ ದಿನದ ಹಿನ್ನೆಲೆಯಲ್ಲಿ ಹಮ್ಮಿಕೊಂಡ ವಿಶೇಷ ಕಾರ್ಯಕ್ರಮದ ತರುವಾಯ ಸುದ್ದಿಗಾರರೊಂದಿಗೆ ಮಾತನಾಡಿದ¸ ಸಂಸ್ಥೆಯ ಮುಖ್ಯ ವ್ಯವಸ್ಥಾಪಕ ನಿರ್ದೇಶಕ ಸುವರ್ಣ ರಾಜು ಅವರು, ಎಚ್ ಎಎಲ್ ನ ಭವಿಷ್ಯದ ಯೋಜನೆಗಳ ಸುಳಿವುಗಳನ್ನು ನೀಡುತ್ತಾ ಹೋದರು. 
ಇಂದು ಭಾರತೀಯ ವಾಯುಯಾನ ಕ್ಷೇತ್ರವು ಎಷ್ಟೆ ಚಟುವಟಿಕೆಗಳನ್ನು ನಡೆಸಿದ್ದರೂ ತಂತ್ರಜ್ಞಾ ನಕ್ಕಾಗಿ ವಿದೇಶಗಳನ್ನೇ ಅವಲಂಬಿಸುತ್ತಿದೆ, ಇದು ಭಾರತದ ಸದ್ಯದ ದೌರ್ಬಲ್ಯ. ಈ ದೌರ್ಬಲ್ಯವನ್ನು ಮೆಟ್ಟಿನಿಲ್ಲುವ ಪ್ರಯತ್ನಗಳು ಆರಂಭವಾಗಿದೆ. ಮುಂದಿನ 25 ವರ್ಷಗಳಲ್ಲಿ ಭಾರತ ವೈಮಾನಿಕ ಕ್ಷೇತ್ರದಲ್ಲಿ ತನ್ನದೇ ಆದ ಸಾಧನೆ ಮಾಡುವ ಮೂಲಕ ಜಗತ್ತಿನ ಮುಂಚೂಣಿಯಲ್ಲಿ ಕಾಣಿಸಿಕೊಳ್ಳಲಿದೆ. 
ಈ ನಿಟ್ಟಿನಲ್ಲಿ ದೇಶದ ನೀತಿಗಳು ಸಹ ಬದಲಾಗುತ್ತಿವೆ ಎಂದರು. ಮುಂದಿನ 25 ವರ್ಷಗಳು ಎಚ್‍ಎಎಎಲ್ ಗೆ ಅತ್ಯಂತ ಸವಾಲುಗಳ ವರ್ಷಗಳೆಂದು ಪರಿಗಣಿಸಿ, ವೈಮಾನಿಕ ಹಾಗೂ ವೈಮಾಂತರಿಕ್ಷ ಕ್ಷೇತ್ರದಲ್ಲಿ ಸ್ವದೇಶಿ ನಿರ್ಮಿತ ವಾಹನಗಳ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು. 
ಜಗತ್ತಿನ 10 ಪ್ರಮುಖ ವೈಮಾನಿಕ ಸಂಸ್ಥೆಗಳಲ್ಲಿ ಎಚ್‍ಎಎಲ್ ಸ್ಥಾನ ಪಡೆಯುತ್ತದೆ ಎಂಬ ವಿಶ್ವಾಸವಿದೆ ಎಂದ ಅವರು, ನಾಗರಿಕ ವಿಮಾನಗಳ ತಯಾರಿಕೆಗೂ ಎಚ್‍ಎಎಲ್ ಕ್ರಮಕೈಗೊಳ್ಳುತ್ತಿದ್ದು, ಬೇರೆ ದೇಶಗಳಿಗೆ ಹೆಲಿಕಾಪ್ಟರ್‍ಗಳ ಮಾರಾಟಕ್ಕೂ ಎಲ್ಲಾ ರೀತಿಯ ಕ್ರಮಕೈಗೊಂಡಿದೆ ಎಂದು ತಿಳಿಸಿದರು. 
ಮುಂದಿನ ಆರೇಳು ತಿಂಗಳಲ್ಲಿ ಕೇಂದ್ರ ಸರ್ಕಾರದಿಂದ ಇನ್ನಷ್ಟು ಹೆಚ್ಚು ಸೌಲಭ್ಯಗಳನ್ನು ಪಡೆದುಕೊಳ್ಳುವ ಭರವಸೆ ಇದೆ. ಈ ನಿಟ್ಟಿನಲ್ಲಿ ಈಗಾಗಲೇ ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸಲಾಗಿದ್ದು, ಶೀಘ್ರವೇ ಈ ಕುರಿತು ಅಂತಿಮ ನಿರ್ಧಾರ ಪ್ರಕಟಗೊಳ್ಳಲಿದೆ. ತೇಜಸ್ ಯುದ್ಧವಿಮಾನದಲ್ಲಿ ತಾಂತ್ರಿಕ ತೊಂದರೆಗಳಿವೆ ಎಂಬ ಮಾತುಗಳಿದ್ದು, ಇದರ ಸಂಪೂರ್ಣ ವಿನ್ಯಾಸ ಎಚ್ ಎಎಲ್ ಮಾಡಿರುತ್ತದೆ. 
ಎಚ್‍ಎಎಲ್ ಎಂಬ ಹೆಮ್ಮೆ: ಎಚ್‍ಎಎಲ್ ನ 75ನೇ ವರ್ಷದ ಸಂಭ್ರಮಾಚರಣೆಯಲ್ಲಿದೆ. ಭಾರತೀಯ ರಕ್ಷಣಾ ಕ್ಷೇತ್ರಕ್ಕೆ ಬೆನ್ನುಲುವಾಗಿ ನಿಂತಿರುವುದು ಮತ್ತು ಬಾಹ್ಯಾಕಾಶ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವ ಇಸ್ರೋದ ಯೋಜನೆಗಳಲ್ಲಿ ಪಾಲುದಾರನಾಗಿರುವುದು ಹೆಮ್ಮೆಯ ವಿಷಯ. ರಕ್ಷಣಾ ಕ್ಷೇತ್ರದ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ವಿಶೇಷ ಪ್ರಯತ್ನ ಮಾಡಿಕೊಂಡು ಬರುತ್ತಿದ್ದು, ಮುಂದೆ ಸಹ ಅಷ್ಟೇ ನಿಷ್ಠೆಯಿಂದ ಜೊತೆಗಿರುತ್ತದೆ ಎಂದರು.
ರಷ್ಯಾ ಭೇಟಿಯಿಂದ ಲಾಭ
ಪ್ರಧಾನಿ ನರೇಂದ್ರ ಮೋದಿಯವರ ರಷ್ಯಾ ಭೇಟಿಯಿಂದ ಎಚ್‍ಎಎಲ್‍ಗೆ ಲಾಭವಾಗುವ ನಿರೀಕ್ಷೆ ಇದೆ. ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸುವರ್ಣ ರಾಜು ಈ ಕುರಿತು ಪ್ರತಿಕ್ರಿಯಿಸಿ, ಸಿಇಓ ಫೋರಂ ವ್ಯವಸ್ಥೆಯಡಿ ಫ್ರಾನ್ಸ್, ಯುಕೆಗೆ ಹೋಗಿದ್ದು, ಇದೀಗ ರಷ್ಯಾಕ್ಕೂ ಹೋಗುತ್ತಿದ್ದು ರಕ್ಷಣಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದೇವೆ. 
ಸ್ವಾವಲಂಬಿ ನಮ್ಮ ದೇಶದ ಕೀ ವರ್ಡ್. ಇದರಡಿ ನಮ್ಮ ಅಪೇಕ್ಷೆಗಳಿರುತ್ತವೆ. ಪ್ರಧಾನಿಯವರ ಭೇಟಿಯಿಂದ ಯಾವ ರೀತಿ ಲಾಭವಾಗಬಹುದೆಂಬುದು ನಂತರ ತಿಳಿಯುತ್ತದೆ, ಸದ್ಯಕ್ಕೆ ಭೇಟಿಯ ಅಜೆಂಡಾ ತಿಳಿಯದು ಎಂದು ಅಭಿಪ್ರಾಯಪಟ್ಟರು. ನಮ್ಮ ಸಂಸ್ಥೆಯಂತೂ ಹೆಚ್ಚಿನದನ್ನು ನಿರೀಕ್ಷಿಸುತ್ತಿದೆ ಎಂದು ತಿಳಿಸಿದರು. 
ಭವಿಷ್ಯದ ಯೋಜನೆಗಳೇನು?
1 ಸಂಪೂರ್ಣ ದೇಶಿ ಸೃಷ್ಟಿಯ ವಿಮಾನದ ರಚನೆ, ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರಯತ್ನ ಆರಂಭವಾಗಿದೆ. ಎರಡು ಎಂಜಿನ್ ರಚನೆ, ತಯಾರಿಕೆ, ಅಭಿವೃದ್ಧಿಪಡಿಸುವ ಕೆಲಸ ನಡೆದಿದೆ.
2 ಸ್ಮಾರ್ಟ್ ಮೆಶಿನ್ ಕಂಪ್ಯೂಟರ್, ಫ್ಯೂಚರಿಸ್ಟಿಕ್ ಸಾಫ್ಟ್ ವೇರ್ ಡಿಮ್ಯಾಂಡ್ ರೇಡಿಯೋ, 60-80 ಸೀಟುಗಳ ಸಾಮರ್ಥ್ಯದ ರೀಜನಲ್ ಟ್ರಾನ್ಸ್ ಪೋರ್ಟ್ ಏರ್ ಕ್ರಾಫ್ಟ್ ಸೇರಿದಂತೆ ವಾಯುಯಾನ ತಂತ್ರಜ್ಞಾ ನ ಕ್ಷೇತ್ರವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಪ್ರಯತ್ನ ಸಾಗಲಿದೆ.
3 ಎಚ್‍ಎಎಲ್‍ನಲ್ಲಿ ಸದ್ಯ ವಾರ್ಷಿಕ 8 ವಿಮಾನ ನಿರ್ಮಿಸುವ ಸಾಮರ್ಥ್ಯವಿದ್ದು, ಅದನ್ನು 16 ವಿಮಾನಗಳ ನಿರ್ಮಿಸುವ ಸಾಮರ್ಥ್ಯಕ್ಕೆ ಹೆಚ್ಚಿಸುವ ಯೋಜನೆ ಕೈಗೆತ್ತಿಕೊಳ್ಳಲಾಗಿದೆ. ಇದಕ್ಕಾಗಿ 1200 ಕೋಟಿ ರೂಪಾಯಿ ಬಂಡವಾಳ ಹೂಡಿಕೆ ಮಾಡಲಾಗುತ್ತಿದೆ.
4 ಹೆಲಿಕ್ಯಾಪ್ಟರ್ ಉದ್ಯಮದಲ್ಲಿ ಎಚ್‍ಎಎಲ್ ಮುಂಚೂಣಿಯಲ್ಲಿದ್ದು, ಮುಂದಿನ ದಿನಗಳಲ್ಲಿ ದೇಶ ವಿದೇಶಗಳಿಂದ ಸಾಕಷ್ಟು ಬೇಡಿಕೆ ಹೆಚ್ಚುವ ನಿರೀಕ್ಷೆ ಇದ್ದು, ಅದಕ್ಕೆ ತಕ್ಕಂತೆ ಕಂಪನಿ ಸಿದ್ಧಗೊಳ್ಳಲಿದೆ. ಸಂಶೋಧನೆಗಳ ಮೂಲಕ ಸಂಸ್ಥೆಯು ತನ್ನ ಉತ್ಪನ್ನವನ್ನು ಇನ್ನಷ್ಟು ಮೇಲ್ದರ್ಜೆಗೇರಿಸಿಕೊಳ್ಳಲಿದ್ದು, ಇದಕ್ಕಾಗಿ ಹಣ ಮೀಸಲಿಡಲಾಗಿದೆ.
5 ಲೈಟ್ ಕಾಂಬೊಟ್ ಹೆಲಿಕಾಪ್ಟರ್, ಲೈಟ್ ಯುಟಿಲಿಟಿ ಹೆಲಿಕಾಪ್ಟರ್, ಲೈಟ್ ಕಂಬೋಟ್ ಏರ್ ಕ್ರಾಫ್ಟ್ ಸೇರಿದಂತೆ 5ನೇ ತಲೆಮಾರಿನ ಪೈಟರ್ ಏರ್ ಕ್ರಾಫ್ಟ್, ಇನ್ನಿತರ ಅನೇಕ ವೈಮಾನಿಕ ಕ್ಷೇತ್ರಕ್ಕೆ ಸಂಬಂಧಿಸಿದ ಉಪಕರಣಗಳ ತಯಾರಿಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com