ಮುಂಬೈ: ಶೀನಾ ಬೋರಾ ಹತ್ಯಾ ಪ್ರಕರಣದಲ್ಲಿ ಶೀನಾ ಬೋರಾಳನ್ನು ಉಸಿರುಗಟ್ಟಿಸಿ ಹತ್ಯೆ ಮಾಡಲಾಗಿತ್ತು ಎಂದು ಆಲ್ ಇಂಡಿಯಾ ಇನ್ಸಿಟ್ಯೂಟ್ ಆಫ್ ಮೆಡಿಕಲ್ ಸಯನ್ಸ್ (ಏಮ್ಸ್) ವೈದ್ಯಕೀಯ ವರದಿ ನೀಡಿದೆ.
ಹಿಂದೂಸ್ತಾನ್ ಟೈಮ್ಸ್ ಪತ್ರಿಕೆಯ ವರದಿ ಪ್ರಕಾರ, ಏಮ್ಸ್ ಸಿಬಿಐಗೆ ಸಲ್ಲಿಸಲಾದ ವೈದ್ಯಕೀಯ ವರದಿಯಲ್ಲಿ ಶೀನಾಳನ್ನು ಉಸಿರುಗಟ್ಟಿಸಿ ಹತ್ಯೆಗೈಯ್ಯಲಾಗಿದೆ ಎಂದು ಬರೆದಿದೆ ಎನ್ನಲಾಗಿದೆ.
ಶೀನಾಳ ಸಾವಿಗೆ ಆಕೆಯನ್ನು ಉಸಿರು ಕಟ್ಟಿಸಿರುವುದೇ ಕಾರಣ ಎಂದು ಆಸ್ಪತ್ರೆಯ ಮೂಲಗಳು ಹೇಳಿರುವುದಾಗಿ ಪತ್ರಿಕೆ ವರದಿ ಮಾಡಿದೆ.