ಕೇಜ್ರಿವಾಲ್‌ ಸಮ-ಬೆಸ ನಿಯಮದಿಂದ ವಿವಿಐಪಿಗಳಿಗೆ ವಿನಾಯ್ತಿ, ಬರೀ 'ಬೂಟಾಟಿಕೆ': ವಾದ್ರಾ

ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಸರ್ಕಾರ ದೆಹಲಿಯಲ್ಲಿ ಜನವರಿ 1ರಿಂದ ಜಾರಿಗೆ ತರಲು ಮುಂದಾಗಿರುವ ಸಮ - ಬೆಸ ಸಂಖ್ಯೆಯ ವಾಹನ ಸಂಚಾರ...
ರಾಬರ್ಟ್ ವಾದ್ರಾ
ರಾಬರ್ಟ್ ವಾದ್ರಾ
ನವದೆಹಲಿ: ಅರವಿಂದ ಕೇಜ್ರಿವಾಲ್‌ ನೇತೃತ್ವದ ಆಮ್‌ ಆದ್ಮಿ ಸರ್ಕಾರ ದೆಹಲಿಯಲ್ಲಿ ಜನವರಿ 1ರಿಂದ ಜಾರಿಗೆ ತರಲು ಮುಂದಾಗಿರುವ ಸಮ - ಬೆಸ ಸಂಖ್ಯೆಯ ವಾಹನ ಸಂಚಾರ ನಿಯಮದಲ್ಲಿ ವಿವಿಐಪಿಗಳಿಗೆ ವಿನಾಯ್ತಿ ನೀಡಿರುವುದನ್ನು ತೀವ್ರವಾಗಿ ಟೀಕಿಸಿರುವ ಸೋನಿಯಾ ಗಾಂಧಿ ಅಳಿಯ ರಾಬರ್ಟ್‌ ವಾದ್ರಾ ಅವರು, ಇದೊಂದು ದೊಡ್ಡ 'ಬೂಟಾಟಿಕೆ' ಎಂದಿದ್ದಾರೆ.
ಕೇಜ್ರಿವಾಲ್ ಸರ್ಕಾರದ ಸಮ-ಬೆಸ ಸಂಖ್ಯೆ ನಿಯಮದ ಬಗ್ಗೆ ತಮ್ಮ ಫೇಸ್‌ಬುಕ್‌ ನಲ್ಲಿ ಬರೆದುಕೊಂಡಿರುವ ವಾದ್ರಾ, ಸಮ ಬೆಸ ಮಾರ್ಗ! ಸಮಾನಾಂತರ ರಿಯಾಯಿತಿ ಪಟ್ಟಿ ಸಂಪೂರ್ಣ ಬೂಟಾಟಿಕೆ. ಕಾನೂನನ್ನು ಜನರ ಹಿತಾಸಕ್ತಿಯಲ್ಲಿ ಅನುಷ್ಠಾನಿಸಬೇಕು; ನಾವೆಲ್ಲರೂ ಅದಕ್ಕೆ ಬದ್ಧರಾಗಿರಬೇಕೇ ಹೊರತು ವಿಐಪಿಗಳಾಗುವುದಲ್ಲ ಎಂದು ಟೀಕಿಸಿದ್ದಾರೆ.
15  ದಿನಗಳ ಪ್ರಾಯೋಗಿಕ ಅವಧಿಗೆಂದು ಜನವರಿ 1ರಿಂದ ಜಾರಿಗೆ ಬರುತ್ತಿರುವ ಸಮ ಬೆಸ ಸಂಖ್ಯೆ ವಾಹನ ನಿಯಮದಡಿ ದೆಹಲಿ ಸರ್ಕಾರ ವಿನಾಯಿತಿ ಪಟ್ಟಿಯನ್ನು ಸಿದ್ಧಪಡಿಸಿದ್ದು, ಆ ಪ್ರಕಾರ ಪ್ರಧಾನಿ, ಮುಖ್ಯಮಂತ್ರಿಗಳು, ರಾಷ್ಟ್ರಪತಿ, ವರಿಷ್ಠ ನ್ಯಾಯಮೂರ್ತಿಗಳು ಮುಂತಾದ ಗಣ್ಯಾತಿಗಣ್ಯರಿಗೆ ಈ ಸಾರಿಗೆ ನಿಯಮದಿಂದ ವಿನಾಯ್ತಿ ನೀಡಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com