ಡಿಡಿಸಿಎ ವಿವಾದ: ತನಿಖಾ ಸಮಿತಿ ವರದಿಯಲ್ಲಿ ಜೇಟ್ಲಿ ಹೆಸರು ಪ್ರಸ್ತಾಪವಿಲ್ಲ

ಡಿಡಿಸಿಎಂ ವಿವಾದ ತನಿಖೆಗಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿಯ ಆಪ್ ಸರ್ಕಾರ ರಚಿಸಿದ ತ್ರಿಸದಸ್ಯ ತನಿಖಾ ಸಮಿತಿಯು ನೀಡಿರುವ...
ಅರುಣ್ ಜೇಟ್ಲಿ
ಅರುಣ್ ಜೇಟ್ಲಿ

ನವದೆಹಲಿ: ಡಿಡಿಸಿಎಂ ವಿವಾದ ತನಿಖೆಗಾಗಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ನೇತೃತ್ವದ ದೆಹಲಿಯ ಆಪ್ ಸರ್ಕಾರ ರಚಿಸಿದ ತ್ರಿಸದಸ್ಯ ತನಿಖಾ ಸಮಿತಿಯು ನೀಡಿರುವ ವರದಿಯಲ್ಲಿ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಅವರ ಹೆಸರು ಪ್ರಸ್ತಾಪಗೊಂಡಿಲ್ಲ.

ಸಮಿತಿಯ 247 ಪುಟಗಳ ವರದಿ ನೀಡಿದ್ದು, ಡಿಡಿಸಿಎ ಮುಖ್ಯಸ್ಥರಾಗಿ ಜೇಟ್ಲಿ ಅವರು ತಪ್ಪೆಸಗಿರುವ ಅಥವಾ ವಂಚನೆ ಎಸಗಿರುವ ಯಾವುದೇ ಕೃತ್ಯ ವರದಿಯಲ್ಲಿ ಪ್ರಸ್ತಾಪಗೊಂಡಿಲ್ಲ ಎಂದು ಮೂಲಗಳು ತಿಳಿಸಿವೆ.

ಕೋಟ್ಲಾ ಕ್ರೀಡಾಂಗಣ ಮರು ನಿರ್ಮಾಣಕ್ಕೆ ಸಂಬಂಧಿಸಿದಂತೆ ನಡೆದಿದೆ ಎಂದು ಆಪಾದಿಸಲಾಗಿರುವ ಅಕ್ರಮಗಳು, ಕಾರ್ಪೋರೇಟ್ ಬಾಕ್ಸ್ ನಿರ್ಮಾಣದಲ್ಲಿ ನಡೆದ ಅಕ್ರಮಗಳು ಇತ್ಯಾದಿಗಳ ಬಗ್ಗೆ ವರದಿ ಹೇಳಿದೆ. ಆದರೆ ಜೇಟ್ಲಿ ಅವರ ಅವಧಿಯಲ್ಲಿ ಯಾವುದೇ ಹಣಕಾಸು ಅಕ್ರಮ ನಡೆದಿರುವ ಬಗ್ಗೆ ವರದಿ ಪ್ರಸ್ತಾಪವನ್ನೇ ಮಾಡಿಲ್ಲ ಎಂದು ಸುದ್ದಿಮೂಲಗಳು ತಿಳಿಸಿವೆ.

ಡಿಡಿಸಿಎ ಅಕ್ರಮ ಕುರಿತ ತನಿಖಾ ಸಮಿತಿ ತನಿಖಾ ಸಮಿತಿ ವರದಿಯು ಜೇಟ್ಲಿ ಪಾತ್ರವನ್ನು ಬಹಿರಂಗ ಪಡಿಸಬಹುದೆಂಬ ಹಿನ್ನೆಲೆಯಲ್ಲಿ ಈ ತನಿಖಾ ವರದಿಯನ್ನು ವಶಪಡಿಸಿಕೊಳ್ಳುವ ಸಲುವಾಗಿ ದೆಹಲಿ ಸಚಿವಾಲಯದ ಮೇಲೆ ಸಿಬಿಐ ದಾಳಿ ನಡೆದಿದೆ ಎಂದು ಕೇಜ್ರಿವಾಲ್ ಮತ್ತು ಇತರ ಆಪ್ ನಾಯಕರು ಇತ್ತೀಚೆಗೆ ಹೇಳಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com