ದಾದ್ರಿಯ ಅಖ್ಲಾಕ್ ಮನೆಯಲ್ಲಿದ್ದದ್ದು ಗೋಮಾಂಸ ಅಲ್ಲ: ಸರ್ಕಾರದ ವರದಿ

ದಾದ್ರಿಯ ಅಖ್ಲಾಕ್ ಮನೆಯ ಫ್ರಿಡ್ಜ್‌ನಲ್ಲಿದ್ದದ್ದು ಮಟನ್ ಹೊರತು ಗೋಮಾಂಸ ಅಲ್ಲ ಎಂದು ಉತ್ತರ ಪ್ರದೇಶ ಸರ್ಕಾರದ ಚೀಫ್ ವೆಟರ್ನಿಟಿ ಆಫೀಸರ್ ನೀಡಿದ...
ಮಹಮ್ಮದ್ ಅಕ್ಲಾಖ್‌
ಮಹಮ್ಮದ್ ಅಕ್ಲಾಖ್‌
ಲಕ್ನೋ: ದಾದ್ರಿಯ ಅಖ್ಲಾಕ್ ಮನೆಯ ಫ್ರಿಡ್ಜ್‌ನಲ್ಲಿದ್ದದ್ದು ಮಟನ್ ಹೊರತು ಗೋಮಾಂಸ ಅಲ್ಲ ಎಂದು ಉತ್ತರ ಪ್ರದೇಶ ಸರ್ಕಾರದ ಚೀಫ್ ವೆಟರ್ನಿಟಿ ಆಫೀಸರ್ ನೀಡಿದ ವರದಿಯಲ್ಲಿ ಹೇಳಲಾಗಿದೆ.
ಸೆಪ್ಟೆಂಬರ್ 28 ರಂದು ಮನೆಯಲ್ಲಿ ಗೋಮಾಂಸ ಸಂಗ್ರಹಿಸಿದ್ದಾರೆ ಎಂಬ ಆರೋಪದ ಮೇರೆಗೆ 15 ಮಂದಿಯ ಗುಂಪೊಂದು ಮಹಮ್ಮದ್ ಅಕ್ಲಾಖ್‌ನ್ನು ಥಳಿಸಿ ಹತ್ಯೆಗೈದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ 15 ಮಂದಿಯ ವಿರುದ್ಧವೂ ಆರೋಪ ಪಟ್ಟಿ ದಾಖಲಿಸಲಾಗಿತ್ತು. 
ಆದಾಗ್ಯೂ, ಅಖ್ಲಾಕ್ ಪ್ರಕರಣದಲ್ಲಿ ಸರ್ಕಾರ ಇಲ್ಲಿಯವರೆಗೆ ತೆಗೆದುಕೊಂಡ ಕ್ರಮಗಳೇ ಸಾಕು. ಇನ್ಮುಂದೆ ಹೆಚ್ಚಿನ ತನಿಖೆ ನಡೆಸುವ ಅಗತ್ಯವಿಲ್ಲ ಎಂದು ಅಖ್ಲಾಕ್ ಕುಟುಂಬ ಹೇಳಿತ್ತು.  ಅಖ್ಲಾಕ್ ಹತ್ಯೆಯ ನಂತರ ಸರ್ಕಾರ ಆತನ ಕುಟುಂಬಕ್ಕೆ ರು.45 ಲಕ್ಷ  ಪರಿಹಾರ ಧನ ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com