ಯೂಟ್ಯೂಬ್‌ನಲ್ಲಿ ಪೋಸ್ಟ್ ಮಾಡಲ್ಪಟ್ಟ ವಿಡಿಯೋ ಒಂದರಲ್ಲಿ ದೋವಲ್, 1945ರಲ್ಲಿ ಎರಡನೇ ಮಹಾಯುದ್ಧವನ್ನು ಗೆದ್ದ ಬ್ರಿಟಿಷರು ಅಷ್ಟು ಬೇಗನೆ ಭಾರತ ಬಿಟ್ಟು ಹೋಗಲು ತೀರ್ಮಾನಿಸಿದ್ದು ಯಾಕೆ? ಎಂಬುದನ್ನು ವಿವರಿಸಿದ್ದಾರೆ. ಬೋಸ್ ತಮ್ಮ ಇಂಡಿಯನ್ ನ್ಯಾಷನಲ್ ಆರ್ಮಿಯ ಸೈನಿಕರ ಮನಸ್ಸಲ್ಲಿ ಹಚ್ಚಿದ್ದ ಸ್ವಾತಂತ್ರ್ಯದ ಕಿಚ್ಚು ಅಂಥದ್ದಾಗಿತ್ತು ಎಂದು ದೋವಲ್ ಇಲ್ಲಿ ಹೇಳಿದ್ದಾರೆ.