ಇಂದೋರ್: ಮಧ್ಯಪ್ರದೇಶದ ಮುಖ್ಯ ಪೊಲೀಸ್ ಪೇದೆಯೊಬ್ಬ ನಿವಾಸದ ಸೋಮವಾರ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ದಾಳಿಯ ವೇಳೆ ಕೋಟ್ಯಾಂತರ ರುಪಾಯಿ ಆಸ್ತಿ ಪತ್ತೆಯಾಗಿದೆ.
ಈ ಕೋಟ್ಯಧಿಪತಿ ಮುಖ್ಯ ಪೇದೆ ಬರೊಬ್ಬರಿ 5 ಮನೆ, 4 ಪ್ಲಾಟ್ ಹಾಗೂ ನಾಲ್ಕು ಎಸ್‌ಯುವಿ ಕಾರು ಹಾಗೂ 8 ಬ್ಯಾಂಕ್ ಖಾತೆ ಹೊಂದಿರುವುದು ಪತ್ತೆಯಾಗಿವೆ.
ಲೋಕಾಯುಕ್ತ ಪೊಲೀಸರು ಸಂಚಾರಿ ವಿಭಾಗದ ಮುಖ್ಯ ಪೇದೆ ಅರುಣ್ ಸಿಂಗ್ ಮನೆ ಮೇಲೆ ದಾಳಿ ಮಾಡಿದ್ದು, ದಾಳಿಯ ವೇಳೆ ಸುಮಾರು 5 ಕೋಟಿ ರೂ. ಆಸ್ತಿ ಪತ್ತೆಯಾಗಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದಾಖಲೆಗಳ ಪ್ರಕಾರ 6 ಸಾವಿರ ಚದರ ಅಡಿಯ 2 ನಿವೇಶನ, ಫಾರ್ಮ್ ಹೌಸ್ ಹಾಗೂ 4 ಫ್ಲ್ಯಾಟ್ ಪತ್ತೆಯಾಗಿದೆ. ಅಷ್ಟೇ ಅಲ್ಲ 2 ಎಕರೆ ಫಾರ್ಮ್ ಹೌಸ್, ರೇವಾದಲ್ಲಿ 8 ಸಾವಿರ ಚದರ ಅಡಿಯ ಎರಡು ನಿವೇಶನಗಳ ದಾಖಲೆ ವಶಕ್ಕೆ ತೆಗೆದುಕೊಳ್ಳಲಾಗಿದೆ.