ನವದೆಹಲಿ: ಯೋಗ ಗುರು ಬಾಬಾ ರಾಮ್ ದೇವ್ ಗೆ ಜವಾಹರ್‍ಲಾಲ್ ನೆಹರೂ ವಿವಿ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಪ್ರಮುಖ ಭಾಷಣ ಮಾಡಲು ಆಹ್ವಾನ ನೀಡಿರುವುದು ಈಗ ವಿವಾದಕ್ಕೆ ಕಾರಣವಾಗಿದೆ.
ಡಿ.30ರಂದು ಅವರು ಭಾಷಣ ಮಾಡಬೇಕಾಗಿತ್ತು. ವಿದ್ಯಾರ್ಥಿ ಘಟನೆಗಳ ತೀವ್ರ ಪ್ರತಿರೋಧದ ಹಿನ್ನೆಲೆಯಲ್ಲಿ ರಾಮ್ ದೇವ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ.
ಆದರೆ ಆಹ್ವಾನ ನೀಡಿದ್ದನ್ನು ವಿವಿ ಸಮರ್ಥಿಸಿಕೊಂಡಿದೆ. ರಾಮ್ ದೇವ್ ಕೂಡ ಟ್ವೀಟ್ ಮಾಡಿ ವಿವಿಯಲ್ಲಿರುವ ಕಾರ್ಯಕ್ರಮಗಳ ಬಗ್ಗೆ ತಮಗೆ ಯಾವುದೇ ಮಾಹಿತಿಲ್ಲ. ಸಮಯವಾವಕಾಶ ಸಿಕ್ಕಿದರೆ ಅಲ್ಲಿಗೆ ತೆರಳಲಿದ್ದೇನೆ ಎಂದು ಟ್ವೀಟ್ ಮಾಡಿದ್ದಾರೆ.