ಯುವತಿಯ ಬೆತ್ತಲೆ ಮೆರವಣಿಗೆ ಪ್ರಕರಣ: 12 ಮಂದಿಗೆ ಶಿಕ್ಷೆ ಪ್ರಕಟ

2010ರಲ್ಲಿ ಮುಂಬೈಯ ಸೆವ್ರಿ ಎಂಬಲ್ಲಿ 22ರ ಹರೆಯದ ಯುವತಿಯೊಬ್ಬಳನ್ನು ಬೆತ್ತಲೆ ಮೆರವಣಿಗೆ ನಡೆಸಿ ಅವಮಾನವೆಸಗಿದ ಪ್ರಕರಣದಲ್ಲಿ 11 ಮಹಿಳೆಯರು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಮುಂಬೈ: 2010ರಲ್ಲಿ ಮುಂಬೈಯ ಸೆವ್ರಿ ಎಂಬಲ್ಲಿ 22ರ ಹರೆಯದ ಯುವತಿಯೊಬ್ಬಳನ್ನು ಬೆತ್ತಲೆ ಮೆರವಣಿಗೆ ನಡೆಸಿ ಅವಮಾನವೆಸಗಿದ ಪ್ರಕರಣದಲ್ಲಿ 11 ಮಹಿಳೆಯರು ಸೇರಿದಂತೆ ಓರ್ವ ಪುರುಷನಿಗೆ ಮುಂಬೈ ಸೆಷನ್ ಕೋರ್ಟ್ ಬುಧವಾರ ಶಿಕ್ಷೆ ವಿಧಿಸಿದೆ.
ಮಹಿಳೆಯನ್ನು ಬೆತ್ತಲೆಗೊಳಿಸಿ ದೌರ್ಜನ್ಯವೆಸಗಿದ್ದಕ್ಕಾಗಿ 12 ಮಂದಿಗೆ 2 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ.
ದೌರ್ಜನ್ಯಕ್ಕೊಳಗಾದ ಯುವತಿಯ ಸಹೋದರ ಅಪ್ರಾಪ್ತೆಯೊಬ್ಬಳನ್ನು ಅತ್ಯಾಚಾರವೆಸಗಿದ್ದ ಎಂದು ಹೇಳಲಾಗುತ್ತಿದೆ. ಸಹೋದರ ಮಾಡಿದ ತಪ್ಪಿಗೆ 2010 ಜೂನ್ 17ರಂದು ಸೆವ್ರಿಯಲ್ಲಿ ಸ್ಥಳೀಯರು ಯುವತಿಯನ್ನು ಬೆತ್ತಲೆ ಮಾಡಿ ಮೆರವಣಿಗೆ ಮಾಡಿದ್ದರು.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಮ್ತಾಜ್ ಶೇಖ್,  ಶಬೀನಾ ಶೇಖ್, ರೆಹನಾ ಶೇಖ್,  ಖಮರುನ್ನಿಸಾ ಖಾನ್, ಮಾಲತಿ ಭಗತ್, ರಾಬಿಯಾ ಕೋಯರಿ, ಲಲ್ಮುನಿ ಬರೇತಾ, ಅನಿತಾ ವಾಘೇಲಾ ,ಕಲ್ಪನಾ ಕೋಯರಿ, ದಾಮೋದರ್ ಮುಲೆ, ಶಾರದಾ ಯಾದವ್ ಮತ್ತು ಸುನಿತಾ ಮಿಶ್ರಾ ಅವರಿಗೆ ತಲಾ ರು. 1000 ದಂಡ ವಿಧಿಸಿ 2 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com