ಪಂಚಾಯತ್ ಆಯ್ತು ಈಗ ಪುರಸಭೆಗೆ ಸ್ಪರ್ಧಿಸುವುದಕ್ಕೂ ವಿದ್ಯಾರ್ಹತೆ ನಿಗದಿಪಡಿಸಲು ಮುಂದಾದ ಹರ್ಯಾಣ ಸರ್ಕಾರ

ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಿದ್ದ ಹರ್ಯಾಣ ಸರ್ಕಾರ, ಈಗ ಪುರಸಭೆಯ ಕಾಯಿದೆಗೂ ತಿದ್ದುಪಡಿ ತಂದು ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಲು ಮುಂದಾಗಿದೆ.
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್(ಸಂಗ್ರಹ ಚಿತ್ರ)
ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್(ಸಂಗ್ರಹ ಚಿತ್ರ)

ಚಂಡೀಗಢ: ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಿದ್ದ ಹರ್ಯಾಣ ಸರ್ಕಾರ, ಈಗ ಪುರಸಭೆಯ ಕಾಯಿದೆಗೂ ತಿದ್ದುಪಡಿ ತಂದು ಕನಿಷ್ಠ ವಿದ್ಯಾರ್ಹತೆ ನಿಗದಿಪಡಿಸಲು ಮುಂದಾಗಿದೆ. 
1994 ರ ಹರ್ಯಾಣ ಪುರಸಭೆ ಕಾಯ್ದೆಗೆ ತಿದ್ದುಪಡಿ ತಂದು ಪುರಸಭೆ ಚುನಾವಣೆಗೆ ಸ್ಪರ್ಧಿಸುವವರಿಗೆ ಕನಿಷ್ಠ ವಿದ್ಯಾರ್ಹತೆಯನ್ನು 10 ನೇ ತರಗತಿ ತೇರ್ಗಡೆಗೆ ನಿಗದಿ ಮಾಡಲಾಗುತ್ತದೆ, ಎಸ್.ಸಿ, ಎಸ್.ಟಿ ಸಮುದಾಯದವರಿಗೆ ವಿದ್ಯಾರ್ಹತೆಯನ್ನು ಮಾಧ್ಯಮಿಕ ಶಾಲೆ ತೇರ್ಗಡೆಗೆ ನಿಗದಿ ಮಾಡಲಾಗುತ್ತದೆ ಎಂದು ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.  
ಕಾಯ್ದೆ ತಿದ್ದುಪಡಿಯಾದ ನಂತರ ಜಾರಿಗೆ ಬರಲಿರುವ ಕಾನೂನು ಪ್ರಕಾರ ಪ್ರಾಥಮಿಕ ಹಂತದ ವಿದ್ಯಾಭ್ಯಾಸ ಮುಗಿಸಿರುವ ಪರಿಶಿಷ್ಟ ಜಾತಿ ಮಹಿಳೆಯರು ಸಹ ಪುರಸಭೆ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಿರುತ್ತಾರೆ. ಇತ್ತೀಚೆಗಷ್ಟೇ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ಹರ್ಯಾಣ ಸರ್ಕಾರ ವಿದ್ಯಾರ್ಹತೆಯನ್ನು ನಿಗದಿಪಡಿಸಿತ್ತು. ಇದನ್ನು ಸುಪ್ರೀಂ ಕೋರ್ಟ್ ನಲ್ಲಿ ಪ್ರಶ್ನಿಸಲಾಗಿತ್ತಾದರೂ ಸುಪ್ರೀಂ ಕೋರ್ಟ್ ಹರ್ಯಾಣ ಸರ್ಕಾರದ ಪರ ತೀರ್ಪು ನೀಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com